ಡಬ್ಲುಟಿಎ ರ್ಯಾಂಕಿಂಗ್ಸ್: ಸಿಬುಲ್ಕೋವಾಗೆ ಮುಂಭಡ್ತಿ

Update: 2016-10-31 18:16 GMT

ಪ್ಯಾರಿಸ್, ಅ.31: ಡಬ್ಲುಟಿಎ ಫೈನಲ್ಸ್ ಟೂರ್ನಿ ವಿಜೇತೆ ಡೊಮಿನಿಕಾ ಸಿಬುಲ್ಕೋವಾ ಸೋಮವಾರ ಇಲ್ಲಿ ಬಿಡುಗಡೆಯಾದ ವಿಶ್ವ ರ್ಯಾಂಕಿಂಗ್‌ನಲ್ಲಿ ಮೂರು ಸ್ಥಾನ ಮೇಲಕ್ಕೇರಿ ಐದನೆ ಸ್ಥಾನ ತಲುಪಿದ್ದಾರೆ.

ಸಿಂಗಾಪುರದಲ್ಲಿ ನಡೆದ ವರ್ಷಾಂತ್ಯದ ಟೂರ್ನಮೆಂಟ್‌ನಲ್ಲಿ ಸ್ಲೋವಾಕಿಯದ ಆಟಗಾರ್ತಿ ಡೊಮಿನಿಕಾ ವಿಶ್ವದ ನಂ.1 ಆಟಗಾರ್ತಿ ಆ್ಯಂಜೆಲಿಕ್ ಕೆರ್ಬರ್‌ರನ್ನು 6-3, 6-4 ಸೆಟ್‌ಗಳಿಂದ ಮಣಿಸಿ ಪ್ರಶಸ್ತಿ ಎತ್ತಿ ಹಿಡಿದಿದ್ದರು.

2014ರ ಆಸ್ಟ್ರೇಲಿಯನ್ ಓಪನ್‌ನಲ್ಲಿ ರನ್ನರ್ ಅಪ್ ಆಗಿರುವ ಸಿಬುಲ್ಕೋವಾ ಅಗ್ರ-10ರಲ್ಲಿ ಸ್ಥಾನ ಪಡೆದು ಭಾರೀ ಮುನ್ನಡೆ ಪಡೆದಿದ್ದಾರೆ. ಸೆರೆನಾ ವಿಲಿಯಮ್ಸ್ 2ನೆ ಸ್ಥಾನದಲ್ಲಿದ್ದಾರೆ.

ಡಬ್ಲುಟಿಎ ರ್ಯಾಂಕಿಂಗ್ಸ್: 1. ಆ್ಯಂಜೆಲಿಕ್ ಕೆರ್ಬರ್(ಜರ್ಮನಿ), 2. ಸೆರೆನಾ ವಿಲಿಯಮ್ಸ್(ಅಮೆರಿಕ), 3. ಅಗ್ನೆಸ್ಕಾ ರಾಂಡ್ವಾಂಸ್ಕಾ(ಪೊಲೆಂಡ್), 4. ಸಿಮೊನಾ ಹಾಲೆಪ್(ರೊಮಾನಿಯ), 5. ಡೊಮಿನಿಕಾ ಸಿಬುಲ್ಕೋವಾ(ಸ್ಲೋವಾಕಿಯ), 6. ಕ್ಯಾರೊಲಿನಾ ಪ್ಲಿಸ್ಕೋವಾ(ಝೆಕ್), 7. ಗಾರ್ಬೈನ್ ಮುಗುರುಝ(ಸ್ಪೇನ್), 8. ಮ್ಯಾಡಿಸನ್ ಕೀಸ್(ಅಮೆರಿಕ), 9. ಸ್ವೆತ್ಲಾನಾ ಕುರ್ನೆುಸೋವಾ(ರಶ್ಯ), 10. ಜೋಹನ್ನಾ ಕಾಂಟ(ಬ್ರಿಟನ್).

ಎಟಿಪಿ ರ್ಯಾಂಕಿಂಗ್: ದ್ವಿತೀಯ ಸ್ಥಾನದಲ್ಲಿ ಮರ್ರೆ

ಪ್ಯಾರಿಸ್, ಅ.31: ಬ್ರಿಟನ್‌ನ ಆ್ಯಂಡಿ ಮರ್ರೆ ಸೋಮವಾರ ಬಿಡುಗಡೆಯಾದ ಹೊಸ ಎಟಿಪಿ ರ್ಯಾಂಕಿಂಗ್‌ನಲ್ಲಿ ಒಟ್ಟು 10985 ಅಂಕದೊಂದಿಗೆ ನಂ.2ನೆ ಸ್ಥಾನಕ್ಕೇರಿದ್ದಾರೆ. ವಿಯೆನ್ನಾದಲ್ಲಿ ಪ್ರಶಸ್ತಿ ಜಯಿಸಿರುವ ಮರ್ರೆ ರ್ಯಾಂಕಿಂಗ್‌ನಲ್ಲಿ ಭಡ್ತಿ ಪಡೆದಿದ್ದಾರೆ. ಇನ್ನೊಂದು ಪ್ರಶಸ್ತಿ ಜಯಿಸಿದರೆ ನೊವಾಕ್ ಜೊಕೊವಿಕ್‌ರಿಂದ ನಂ.1 ಸ್ಥಾನ ಕಸಿದುಕೊಳ್ಳಲಿದ್ದಾರೆ.

ಫ್ರಾನ್ಸ್‌ನ ಜೋ-ವಿಲ್ಫ್ರೆಡ್ ಸೋಂಗರನ್ನು 6-3, 7-6(8/6) ಸೆಟ್‌ಗಳಿಂದ ಮಣಿಸಿದ ಮರ್ರೆ ಒಂದೇ ತಿಂಗಳಲ್ಲಿ ಮೂರನೆ ಪ್ರಶಸ್ತಿ ಎತ್ತಿ ಹಿಡಿದರು. ಮರ್ರೆ ಈಗಾಗಲೇ ಚೀನಾ ಓಪನ್ ಹಾಗೂ ಶಾಂೈ ಮಾಸ್ಟರ್ಸ್‌ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.

ಮುಂದಿನ ವಾರ ಪ್ಯಾರಿಸ್ ಮಾಸ್ಟರ್ಸ್‌ನಲ್ಲೂ ಮರ್ರೆ ತನ್ನ ಭರ್ಜರಿ ಫಾರ್ಮ್‌ನ್ನು ಮುಂದುವರಿಸಿದರೆ ವಿಶ್ವದ ನಂ.1 ಆಟಗಾರನಾಗುವ ಸಾಧ್ಯತೆಯಿದೆ.

ಎಟಿಪಿ ರ್ಯಾಂಕಿಂಗ್ಸ್: 1. ನೊವಾಕ್ ಜೊಕೊವಿಕ್(ಸರ್ಬಿಯ), 2. ಆ್ಯಂಡಿ ಮರ್ರೆ(ಬ್ರಿಟನ್), 3. ಸ್ಟಾನ್ ವಾವ್ರಿಂಕ(ಸ್ವಿಸ್), 4.ಕೀ ನಿಶಿಕೊರಿ(ಜಪಾನ್), 5. ಮಿಲಾಸ್ ರಾವೊನಿಕ್(ಕೆನಡಾ), 6. ರಫೆಲ್ ನಡಾಲ್(ಸ್ಪೇನ್), 7. ಗಾಯೆಲ್ ಮಾನ್‌ಫಿಲ್ಸ್(ಫ್ರಾನ್ಸ್), 8. ಡೊಮಿನಿಕ್ ಥಿಯೆಮ್(ಆಸ್ಟ್ರೇಲಿಯ), 9. ರೋಜರ್ ಫೆಡರರ್(ಸ್ವಿಸ್), 10. ಮರಿನ್ ಸಿಲಿಕ್(ಕ್ರೊಯೇಷಿಯ).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News