×
Ad

ಚೀನಾ ಸೂಪರ್ ಸರಣಿ ನನ್ನ ಕೊನೆಯ ಪಂದ್ಯ ಆಗಬಹುದು:ಸೈನಾ ನೆಹ್ವಾಲ್

Update: 2016-11-02 23:03 IST

 ಹೊಸದಿಲ್ಲಿ, ನ.2: ಚೀನಾ ಸೂಪರ್ ಸರಣಿಯಲ್ಲಿ ಆಡುವ ಮೂಲಕ ಬ್ಯಾಡ್ಮಿಂಟನ್ ಕಣಕ್ಕೆ ವಾಪಸಾಗಲು ಸಜ್ಜಾಗುತ್ತಿರುವ ಭಾರತದ ಸ್ಟಾರ್ ಶಟ್ಲರ್ ಸೈನಾ ನೆಹ್ವಾಲ್, ಚೀನಾ ಸೂಪರ್ ಸರಣಿಯೇ ತನ್ನ ಕೊನೆಯ ಸರಣಿ ಆಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

ನ.15 ರಿಂದ ಚೀನಾ ಸೂಪರ್ ಸರಣಿ ಆರಂಭವಾಗಲಿದೆ.

ರಿಯೋ ಒಲಿಂಪಿಕ್ಸ್‌ನ ಬಳಿಕ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ 26ರ ಪ್ರಾಯದ ಸೈನಾ ಇನ್ನಷ್ಟೇ ಸಂಪೂರ್ಣ ಫಿಟ್‌ನೆಸ್ ಪಡೆಯಬೇಕಾಗಿದೆ.

ನಾನು ಕಠಿಣ ಶ್ರಮಪಡುತ್ತಿರುವೆ. ಗೆಲುವು ಅಥವಾ ಸೋಲಿನ ಬಗ್ಗೆ ಯೋಚಿಸುತ್ತಿಲ್ಲ. ಆದರೆ, ನನ್ನ ಹೃದಯಾಂತರದಲ್ಲಿ ಚೀನಾ ಸೂಪರ್ ಸರಣಿಯಲ್ಲಿ ವೃತ್ತಿಜೀವನ ಕೊನೆಯಾಗಲಿದೆ ಎಂಬ ಭಾವನೆ ಉಂಟಾಗುತ್ತಿದೆ ಎಂದು ಹೇಳಿದ್ದಾರೆ.

 ‘‘ನನ್ನ ವೃತ್ತಿಜೀವನ ಕೊನೆಗೊಂಡಿತು. ಮತ್ತೆ ವಾಪಸಾಗಲಾರೆ ಎಂದು ಹೆಚ್ಚಿನವರು ಯೋಚಿಸಿದ್ದರು. ಚೀನಾ ಸರಣಿ ನನ್ನ ವೃತ್ತಿಜೀವನದ ಕೊನೆಯ ಸರಣಿ ಎಂದು ನನ್ನ ಅಂತರಾತ್ಮ ಹೇಳುತ್ತಿದೆ. ಮುಂದೇನಾಗುತ್ತದೆ ಎಂದು ಮೊದಲೇ ಹೇಳಲು ಯಾರಿಂದಲೂ ಸಾಧ್ಯವಿಲ್ಲ. ನಾನು ಮುಂದಿನ ಒಂದು ವರ್ಷದ ಬಗ್ಗೆ ಯೋಚಿಸುವೆ’’ ಎಂದು ಸೈನಾ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News