ಭಾರತೀಯ ಕ್ರಿಕೆಟಿಗ ಇಶಾಂತ್‌ಗೆ ಡಿಸೆಂಬರ್‌ನಲ್ಲಿ ಮದುವೆ
ವಾರಣಾಸಿ, ನ.3: ಭಾರತೀಯ ಕ್ರಿಕೆಟಿಗ ಇಶಾಂತ್ ಶರ್ಮ ಬಾಸ್ಕೆಟ್‌ಬಾಲ್ ಆಟಗಾರ್ತಿ ಪ್ರತಿಮಾ ಸಿಂಗ್‌ರನ್ನು ಡಿಸೆಂಬರ್ 9 ರಂದು ವಿವಾಹವಾಗಲಿದ್ದಾರೆ.
ಇಶಾಂತ್ ಹಾಗೂ ಪ್ರತಿಮಾರ ಮದುವೆ ನಿಶ್ಚಿತಾರ್ಥ ಜೂ.19 ರಂದು ನಡೆದಿತ್ತು.
ವಾರಣಾಸಿ ಮೂಲದ ಪ್ರತಿಮಾ ಸಿಂಗ್ ಏಷ್ಯನ್ ಗೇಮ್ಸ್ ಸಹಿತ ವಿವಿಧ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಭಾರತೀಯ ಬಾಸ್ಕೆಟ್‌ಬಾಲ್ ತಂಡವನ್ನು ಪ್ರತಿನಿಧಿಸಿದ್ದರು. ಭಾರತೀಯ ಮಹಿಳಾ ಬಾಸ್ಕೆಟ್‌ಬಾಲ್ ತಂಡವನ್ನು ನಾಯಕಿಯಾಗಿಯೂ ಮುನ್ನಡೆಸಿದ್ದರು.
ದೇಶದ ಬಾಸ್ಕೆಟ್‌ಬಾಲ್‌ನಲ್ಲಿ ‘ಸಿಂಗ್ ಸಿಸ್ಟರ್ಸ್’ ಎಂದೇ ಖ್ಯಾತಿ ಪಡೆದಿರುವ ಐವರು ಸಹೋದರಿಯರ ಪೈಕಿ ಪ್ರತಿಮಾ ಹಿರಿಯವಳು. ಪ್ರತಿಮಾರ ಎಲ್ಲ ಸಹೋದರಿಯರು ಬಾಸ್ಕೆಟ್‌ಬಾಲ್ ಆಟಗಾರ್ತಿಯರಾಗಿದ್ದಾರೆ. ನ್ಯಾಶನಲ್ ಹಾಗೂ ಇಂಟರ್‌ನ್ಯಾಶನಲ್ ಮಟ್ಟದಲ್ಲಿ ಆಡಿದ್ದಾರೆ.
ಈ ಹಿಂದೆ ಭಾರತದ ಪ್ರಮುಖ ವೇಗದ ಬೌಲರ್ ಆಗಿದ್ದ ಇಶಾಂತ್ ಇದೀಗ ಮೊದಲಿನಷ್ಟು ಉತ್ತಮ ಪ್ರದರ್ಶನ ನೀಡುತ್ತಿಲ್ಲ. ಇತ್ತೀಚೆಗೆ ಚಿಕುನ್‌ಗುನ್ಯಾಕ್ಕೆ ತುತ್ತಾಗಿದ್ದ ಇಶಾಂತ್ ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದರು. ಮುಂಬರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದಾರೆ.