ಆ್ಯಂಡಿ ಮರ್ರೆ ನಂ.1

Update: 2016-11-05 17:43 GMT

ಪ್ಯಾರಿಸ್, ನ.5: ಬ್ರಿಟನ್‌ನ ಆ್ಯಂಡಿ ಮರ್ರೆ ಶನಿವಾರ ಪುರುಷರ ವಿಶ್ವ ಟೆನಿಸ್ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ.
ಪ್ಯಾರಿಸ್ ಮಾಸ್ಟರ್ಸ್‌ನ ಸೆಮಿಫೈನಲ್‌ನಲ್ಲಿ ಮಿಲಾಸೊ ರಾವೊನಿಕ್ ಗಾಯಗೊಂಡು ಕೂಟದಿಂದ ಹೊರನಡೆದಿರುವ ಹಿನ್ನೆಲೆಯಲ್ಲಿ ಮರ್ರೆ ಅಗ್ರಸ್ಥಾನಕ್ಕೆ ಏರಿದ್ದಾರೆ.
ಮರ್ರೆ ವೃತ್ತಿ ಬದುಕಿನಲ್ಲಿ ಮೊದಲ ಬಾರಿ ನಂ.1 ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ನೋವಾಕ್ ಜೊಕೊವಿಕ್ ಅವರು ಬಹಳ ಸಮಯದ ಬಳಿಕ ಅಗ್ರ ಸ್ಥಾನವನ್ನು ಕಳೆದುಕೊಂಡಿದ್ದಾರೆ.
ಬಲಕಾಲಿನ ಸ್ನಾಯು ಸೆಳೆತದ ಸಮಸ್ಯೆಯಿಂದಾಗಿ ರಾವೊನಿಕ್ ಕೂಟದಿಂದ ದೂರ ಸರಿದಿದ್ದರು. ಇದರಿಂದಾಗಿ ರವಿವಾರ ನಡೆಯಲಿರುವ ಫೈನಲ್‌ನಲ್ಲಿ ಮರ್ರೆ ಅವರು ಜಾನ್ ಇಸ್ನೇರ್‌ನ್ನು ಎದುರಿಸುವಂತಾಗಿದೆ.
ರಾವೊನಿಕ್ ಅವರು ಶುಕ್ರವಾರ ಕ್ವಾರ್ಟರ್ ಫೈನಲ್‌ನಲ್ಲಿ ಜೊ ವಿಲ್‌ಫ್ರೇಡ್ ಸೊಂಗಾ ವಿರುದ್ಧ ಆಡುವಾಗ ಗಾಯಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News