×
Ad

ರಣಜಿ ಟ್ರೋಫಿ: ಲಲಿತ್‌ಗೆ ಐದು ವಿಕೆಟ್, ಕರ್ನಾಟಕ ಆಲೌಟ್

Update: 2016-11-05 23:06 IST

ವಡೋದರ, ನ.5: ವಿದರ್ಭ ವಿರುದ್ಧ ಇಲ್ಲಿ ಶನಿವಾರ ಆರಂಭಗೊಂಡ ರಣಜಿ ಟ್ರೋಫಿಯ ‘ಬಿ ಗುಂಪಿನ ಪಂದ್ಯದಲ್ಲಿ ಮಧ್ಯಮ ವೇಗದ ಬೌಲರ್ ಲಲಿತ್ ಯಾದವ್ ದಾಳಿಗೆ ಸಿಲುಕಿದ ಕರ್ನಾಟಕ ತಂಡ 267 ರನ್‌ಗೆ ಆಲೌಟಾಗಿದೆ.

ಇಲ್ಲಿನ ಮೋತಿಬಾಘ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ವಿದರ್ಭ ತಂಡ ಕರ್ನಾಟಕವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು.

ಮಾಜಿ ರಣಜಿ ಚಾಂಪಿಯನ್ ಕರ್ನಾಟಕ ಇನಿಂಗ್ಸ್‌ನ 2ನೆ ಓವರ್‌ನಲ್ಲಿ ಆರಂಭಿಕ ಆಟಗಾರ ಮಾಯಾಂಕ್ ಅಗರವಾಲ್ ವಿಕೆಟ್ ಕಳೆದುಕೊಂಡು ಕಳಪೆ ಆರಂಭ ಪಡೆಯಿತು. ಇನ್ನೋರ್ವ ಆರಂಭಿಕ ಆಟಗಾರ ಆರ್.ಸಮರ್ಥ್(12) ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಡಲು ವಿಫಲರಾದರು.

ರಾಬಿನ್ ಉತ್ತಪ್ಪ(44) ಹಾಗೂ ಮನೀಷ್ ಪಾಂಡೆ(20) ಮೂರನೆ ವಿಕೆಟ್‌ಗೆ 40 ರನ್ ಸೇರಿಸಿ ತಂಡಕ್ಕೆ ಆಸರೆಯಾದರು. ಈ ಜೋಡಿಯನ್ನು ವಿದರ್ಭದ ಯಶಸ್ವಿ ಬೌಲರ್ ಲಲಿತ್ ಯಾದವ್(5-67) ಬೇರ್ಪಡಿಸಿದರು.

 ನಾಯಕ ವಿನಯ ಕುಮಾರ್(39) ಒಂದಷ್ಟು ಹೋರಾಟ ನಡೆಸಿದರು. 10ನೆ ವಿಕೆಟ್‌ಗೆ 78 ರನ್ ಜೊತೆಯಾಟ ನಡೆಸಿದ ಕೆ. ಗೌತಮ್(ಔಟಾಗದೆ 60 ರನ್, 59 ಎಸೆತ, 6 ಬೌಂಡರಿ, 2 ಸಿಕ್ಸರ್) ಹಾಗೂ ಎಸ್.ಅರವಿಂದ್(26) ತಂಡ ಗೌರವಾರ್ಹ ಮೊತ್ತ ದಾಖಲಿಸಲು ನೆರವಾದರು.

ಸ್ಕೋರ್ ವಿವರ

ಕರ್ನಾಟಕ ಪ್ರಥಮ ಇನಿಂಗ್ಸ್: 267 ರನ್‌ಗೆ ಆಲೌಟ್

ಸಮರ್ಥ್ ಸಿ ಗಣೇಶ್ ಸತೀಶ್ ಬಿ ಠಾಕೂರ್ 12

ಅಗರವಾಲ್ ಸಿ ಗಣೇಶ್ ಸತೀಶ್ ಬಿ ಲಲಿತ್ ಯಾದವ್ 02

 ಉತ್ತಪ್ಪ ಸಿ ಶರ್ಮ ಬಿ ಸರ್ವಾಟೆ 46

ಪಾಂಡೆ ಎಲ್‌ಬಿಡಬ್ಲು ಲಲಿತ್ ಯಾದವ್ 20

ಸ್ಟುವರ್ಟ್ ಬಿನ್ನಿ ಎಲ್‌ಬಿಡಬ್ಲು ಠಾಕೂರ್ 11

ಗೌತಮ್ ಸಿ ಶರ್ಮ ಬಿ ಯಾದವ್ 00

ಗೋಪಾಲ್ ಸಿ ಶರ್ಮ ಬಿ ಯಾದವ್ 01

ವಿನಯ್‌ಕುಮಾರ್ ಬಿ ಠಾಕೂರ್ 39

ಕಾಝಿ ಎಲ್‌ಬಿಡಬ್ಲು ವಖಾರೆ 21

ಗೌತಮ್ ಅಜೇಯ 60

ಇತರ 29

ವಿಕೆಟ್ ಪತನ: 1-2, 2-37, 3-77, 4-102, 5-102, 6-103, 7-120, 8-157, 9-189.

ಬೌಲಿಂಗ್ ವಿವರ:

ವಾಘ್ 22.1-5-52-0

ಯಾದವ್ 20.5-4-67-5

ಠಾಕೂರ್ 20-7-54-3

ವಖಾರೆ 7-0-35-1

ವಿದರ್ಭ ಪ್ರಥಮ ಇನಿಂಗ್ಸ್: ವಿಕೆಟ್ ನಷ್ಟವಿಲ್ಲದೆ 10

ಸಂಜಯ್ ಅಜೇಯ 9

ಫೈಝಲ್ ಅಜೇಯ 0

ಬೌಲಿಂಗ್ ವಿವರ:

ವಿನಯಕುಮಾರ್ 2-0-10-0

ಅರವಿಂದ್ 1-1-0-0.

ರಣಜಿ ಟ್ರೋಫಿ: ಮೊದಲ ದಿನದ ಫಲಿತಾಂಶ

ಇಂದೋರ್: ಆಂಧ್ರ ವಿರುದ್ಧ ಸರ್ವಿಸಸ್ 170/3

ರಾಯ್‌ಪುರ: ಬರೋಡಾ 93, ತಮಿಳುನಾಡು 79/1

ಕಟಕ್: ಗೋವಾ ವಿರುದ್ಧ ಛತ್ತೀಸ್‌ಗಢ 103/2

ಥುಂಬ: ದಿಲ್ಲಿ ವಿರುದ್ಧ ಜಾರ್ಖಂಡ್ 359/6

 ರಾಂಚಿ: ಜಮ್ಮು-ಕಾಶ್ಮೀರ 162, ಹಿಮಾಚಲ ಪ್ರದೇಶ 58/2

ವಡೋದರ: ಕರ್ನಾಟಕ 267, ವಿದರ್ಭ 10/0

ಜೈಪುರ: ಕೇರಳ ವಿರುದ್ಧ ಹರ್ಯಾಣ 227/8

ಮೈಸೂರು: ರೈಲ್ವೇಸ್ ವಿರುದ್ಧ ಮುಂಬೈ 244/5

ಹೈದರಾಬಾದ್: ಪಂಜಾಬ್ ವಿರುದ್ಧ ಉತ್ತರ ಪ್ರದೇಶ 300/6

ಪಟಿಯಾಲ: ಒಡಿಶಾ ವಿರುದ್ಧ ರಾಜಸ್ಥಾನ 249/5

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News