×
Ad

ದ್ವಿತೀಯ ಟೆಸ್ಟ್: ಶ್ರೀಲಂಕಾ 504 ರನ್

Update: 2016-11-07 23:31 IST

ಹರಾರೆ, ನ.7: ಧನಂಜಯ ಡಿಸಿಲ್ವಾ(127) ಹಾಗೂ ಗುಣರತ್ನೆ(116) ಆಕರ್ಷಕ ಶತಕದ ಸಹಾಯದಿಂದ ಶ್ರೀಲಂಕಾ ತಂಡ ಝಿಂಬಾಬ್ವೆ ವಿರುದ್ಧದ ಎರಡನೆ ಟೆಸ್ಟ್ ಪಂದ್ಯದಲ್ಲಿ 504 ರನ್ ಕಲೆ ಹಾಕಿದೆ.

5 ವಿಕೆಟ್ ನಷ್ಟಕ್ಕೆ 290 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಶ್ರೀಲಂಕಾ ತಂಡ ಡಿಸಿಲ್ವಾ ಹಾಗೂ ಗುಣರತ್ನೆ ಸಾಹಸದಿಂದ 504 ರನ್ ಗಳಿಸಿತು.

ಡಿಸಿಲ್ವಾ ಹಾಗೂ ಗುಣರತ್ನೆ 6ನೆ ವಿಕೆಟ್‌ಗೆ 87 ರನ್ ಸೇರಿಸಿದರು. ಡಿಸಿಲ್ವಾ ಔಟಾದ ಬಳಿಕ ನಾಯಕ ರಂಗನ ಹೆರಾತ್(27) ಹಾಗೂ ಗುಣರತ್ನೆ 8ನೆ ವಿಕೆಟ್‌ಗೆ 75 ರನ್ ಸೇರಿಸಿ ಶ್ರೀಲಂಕಾ ಬೃಹತ್ ಮೊತ್ತ ಗಳಿಸಲು ನೆರವಾದರು. ಝಿಂಬಾಬ್ವೆ ಪರ ಟಿರಿಪಾನೊ(3-91) ಹಾಗೂ ಕ್ರಿಮರ್(3-136)ತಲಾ 3 ವಿಕೆಟ್ ಕಬಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News