ಝಾರ್ಖಂಡ್ ನಿಂದ ಬಂದ ಇನ್ನೊಬ್ಬ ಧೋನಿ !

Update: 2016-11-08 11:54 GMT

ಹೊಸದಿಲ್ಲಿ,ನ.8 : ಝಾರ್ಖಂಡ್ ನಂತಹ ಪುಟ್ಟ ರಾಜ್ಯ ದೇಶಕ್ಕೆ ಮಹೇಂದ್ರ ಸಿಂಗ್ ಧೋನಿಯವರಂತಹ ಮಹಾನ್ ಕ್ರಿಕೆಟಿಗನನ್ನು ನೀಡಿದರೆ, ಈಗ ಇದೇ ರಾಜ್ಯದಿಂದ ಇನ್ನೊಬ್ಬ ಧೋನಿ ಬಂದಿದ್ದಾನೆ. ಈತನೇ ಇಶಾನ್ ಕಿಶನ್, ಈತ ಕೂಡ ಧೋನಿಯಂತೆಯೇ ವಿಕೆಟ್ ಕೀಪರ್ ಬ್ಯಾಟ್ಸ್ ಮ್ಯಾನ್ ಆಗಿದ್ದಾನೆ. ಇತ್ತೀಚಿಗಿನ ರಣಜಿ ಪಂದ್ಯವೊಂದರ ವೇಳೆ ಇಶಾನ್ ಆಟ ಅದೆಷ್ಟು ಅಮೋಘವಾಗಿತ್ತೆಂದರೆ ಧೋನಿಯಂಥವರು ಕೂಡ ಮೂಗಿನ ಮೇಲೆ ಬೆರಳಿಡುವಂತಹುದ್ದಾಗಿದೆ. ಥುಂಬಾದಲ್ಲಿ ಝಾರ್ಖಂಡ್ ಹಾಗೂ ದಿಲ್ಲಿ ನಡುವೆನಡೆದರಣಜಿ ಬಿ ಗ್ರೂಪಿನ ಪಂದ್ಯದಲ್ಲಿ ಅವರು ಆಕರ್ಷಕ ದ್ವಿಶತಕ ಸಿಡಿಸಿದ್ದಾರೆ. ಇದು ಝಾರ್ಖಂಡ್ ರಾಜ್ಯ ತಂಡದ ಯಾವನೇ ಆಟಗಾರ ಗಳಿಸಿದ ಅತ್ಯಧಿಕ ರನ್ ಆಗಿದೆ. ಈ ಪಂದ್ಯದಲ್ಲಿ ಅವರು ದಾಖಲೆ ಸಿಕ್ಸ್ ಗಳನ್ನೂ ಬಾರಿಸಿದ್ದಾರೆ.

ದೆಹಲಿ ವಿರುದ್ಧದ ಪಂದ್ಯದಲ್ಲಿ 336 ಚೆಂಡುಗಳನ್ನು ಎದುರಿಸಿದ ಇಶಾನ್ ಗಳಿಸಿದ ಒಟ್ಟು ರನ್ನುಗಳು 273.ಒಟ್ಟು 14 ಸಿಕ್ಸರ್ ಗಳು ಹಾಗೂ 21 ಬೌಂಡರಿಗಳನ್ನೂ ಅವರು ಬಾರಿಸಿದ್ದಾರೆ. ಈ ಹಿಂದೆ ಹಿಮಾಚಲ ಪ್ರದೇಶದ ಕ್ರಿಕೆಟಿಗ 1990 ರಲ್ಲಿ 128 ರನ್ನುಗಳನ್ನು ಬಾರಿಸಿ 14 ಸಿಕ್ಸರ್ ಬಾರಿಸಿದ್ದಾರೆ.

ಇಶಾನ್ ಅವರುಈ ಹಿಂದೆ 2015 ರಲ್ಲಿ ಸೌರಾಷ್ಟ್ರದ ವಿರುದ್ಧದ ರಣಜಿ ಪಂದ್ಯದಲ್ಲಿ ರಾಜಕೋಟ್ ಸ್ಟೇಡಿಯಂನಲ್ಲಿ ಆಡುತ್ತಾ 69 ಚೆಂಡುಗಳನ್ನು ಎದುರಿಸಿ 87 ರನ್ನುಗಳನ್ನು ಬಾರಿಸಿದ್ದರು.ಈ ಇನ್ನಿಂಗ್ಸ್ ನಲ್ಲಿ ಅವರು 8 ಸಿಕ್ಸರ್ ಹಾಗೂ 4 ಬೌಂಡರಿಗಳನ್ನೂ ಹೊಡೆದಿದ್ದರು.

ಹೆಚ್ಚಿನ ಸಂದರ್ಭದಲ್ಲಿ ಮಧ್ಯಮ ಸರಣಿಯ ದಾಂಡಿಗನಾಗಿ ಅಂಗಳಕ್ಕೆ ಕಾಲಿಡುವ ಇಶಾನ್ ಝಾರ್ಖಂಡ್ ಗೆ ಕೆಲವೊಮ್ಮೆ ಓಪನಿಂಗ್ ಬ್ಯಾಟ್ಸ್ ಮೆನ್ ಆಗಿಯೂ ಆಡಿದ್ದಾರೆ. ಯಾವುದೇ ಸರದಿಯಲ್ಲಿ ಆಟವಾಡುವುದೂ ಅವರಿಗೆ ಸಲೀಸು. ಅವರು ಮೊದಲ ಬಾರಿ ರಣಜಿ ಪಂದ್ಯವಾಡಿದ್ದು 1998 ರಲ್ಲಿ. ಈಪಂದ್ಯದಲ್ಲಿ ಅವರು 60 ರನ್ ಬಾರಿಸಿ ತಮ್ಮ ಪ್ರತಿಭೆಯನ್ನು ಸಾಬೀತು ಪಡಿಸಿದ್ದರು.

ಇಶಾನ್ ಕಿಶನ್ ಅವರು ಪಾಟ್ನಾದ ದಿಲ್ಲಿಪಬ್ಲಿಕ್ ಸ್ಕೂಲಿನಲ್ಲಿ ಓದುತ್ತಿದ್ದ ಸಮಯ ಅವರ ಕ್ರಿಕೆಟ್ ಹುಚ್ಚು ಅದೆಷ್ಟಿತ್ತೆಂದರೆಅವರು ಪಾಠದ ಕಡೆಗೆ ಗಮನ ನೀಡುವುದನ್ನೇ ಬಿಟ್ಟಿದ್ದರು. ಇದರಿಂದ ಅವರು ಒಮ್ಮೆ ಶಾಲೆಯಿಂದ ಡಿಬಾರ್ ಕೂಡ ಆಗಿದ್ದರು. ಆದರೂ ಅವರು ತಮ್ಮ ಕ್ರಿಕೆಟ್ ಪ್ರೇಮವನ್ನು ತ್ಯಜಿಸಿರಲಿಲ್ಲ. ಅವರ ಸಹೋದರ ರಾಜ್ ಕಿಶನ್ ಅವರಿಗೆ ಕ್ರಿಕೆಟ್ ಆಡಲು ನೀಡಿದ ಪರಿಪೂರ್ಣ ಸಹಕಾರವೇ ಇಂದು ಅವರೊಬ್ಬ ಪ್ರತಿಭಾನ್ವಿತ ಕ್ರಿಕೆಟಿಗ ಎಂದು ಗುರುತಿಸಲು ಕಾರಣವಾಯಿತು. ಡಿಸೆಂಬರ್ 2014 ರಲ್ಲಿ ಅವರು ಪ್ರಥಮ ಶ್ರೇಣಿ ಕ್ರಿಕೆಟ್ ಲೋಕಕ್ಕೆ ಪಾದಾರ್ಪಣೆಗೈದರು.

ಈ ವರ್ಷದ ಫೆಬ್ರವರಿ ತಿಂಗಳಲ್ಲಿಟಯರ್ ಕಂಪೆನಿಯಾದ ಸಿಯೆಟ್ ನೊಂದಿಗೆ ಮೂರು ವರ್ಷಗಳ ಒಪ್ಪಂದಕ್ಕೆ ಅವರು ಸಹಿ ಹಾಕಿದ್ದುಅವರು ಈ ಸಂದರ್ಭ ಸಿಯೆಟ್ ಎಂಬ ಹೆಸರು ಬರೆದ ಬ್ಯಾಟಿನಲ್ಲಿಯೇ ಆಡಲಿದ್ದಾರೆ.ಅವರಿಗೆ ಅವರ ಪಾಲಿನ ಆದರ್ಶ ಮಹೇಂದ್ರ ಸಿಂಗ್ ಧೋನಿಯೊಂದಿಗೆ ವಿಜಯ್ ಹಜಾರೆ ಟ್ರಾಫಿಯಲ್ಲಿ ಆಡುವ ಅವಕಾಶ ದೊರಕಿದರೆ ಐಪಿಎಲ್ ನಲ್ಲಿ ಅವರು ಸುರೇಶ್ ರೈನಾ ಅವರ ಟೀಮ್ ಗುಜರಾತ್ ಲಯನ್ಸ್ ನಲ್ಲಿದ್ದಾರೆ.

ಇಶಾನ್ ಅವರು ಫಸ್ಟ್ ಕ್ಲಾಸ್ ಕ್ರಿಕೆಟ್ ನಲ್ಲಿ ಒಟ್ಟು 14 ಪಂದ್ಯಗಳಲ್ಲಿ926 ರನ್ ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News