×
Ad

ರೋಹಿತ್‌ ಶರ್ಮ ಗಾಯಕ್ಕೆ ಶಸ್ತ್ರ ಚಿಕಿತ್ಸೆ ಯಶಸ್ವಿ

Update: 2016-11-12 14:02 IST

ಹೊಸದಿಲ್ಲಿ, ನ.12 : ಭಾರತ ಕ್ರಿಕೆಟ್‌ ತಂಡದ ಅಗ್ರ ಸರದಿಯ ದಾಂಡಿಗ ರೋಹಿತ್‌ ಶರ್ಮ ಅವರ  ಬಲ ತೊಡೆಯ ಗಾಯಕ್ಕೆ ಶುಕ್ರವಾರ  ನಡೆಸಿರುವ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದ್ದು, ರೋಹಿತ್‌ ಶರ್ಮ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿದೆ
ಮುಂದಿನ ಇಪ್ಪತ್ತನಾಲ್ಕು ಗಂಟೆಗಳ ಒಳಗಾಗಿ ಅವರು ಆಸ್ಪತ್ರೆಯಿಂದ ಬಿಡುಗಡೆಗೊಳ್ಳಲಿದ್ದಾರೆಂದು ಎಂದು ಮೂಲಗಳು ತಿಳಿಸಿವೆ.
ರೋಹಿತ್‌ ಶರ್ಮ ವಿಶಾಖಪಟ್ಟಣದಲ್ಲಿ ಅ.29ರಂದು ನ್ಯೂಝಿಲೆಂಡ್ ವಿರುದ್ಧದ ಐದನೆ ಏಕದಿನ ಪಂದ್ಯದ ವೇಳೆ ಗಾಯಗೊಂಡಿದ್ದರು. ಈ ಕಾರಣದಿಂದಾಗಿ ತವರಿನಲ್ಲಿ ನಡೆಯುತ್ತಿರುವ ಇಂಗ್ಲೆಂಡ್‌ ವಿರುದ್ಧದ ಸರಣಿಯಿಂದ ದೂರ ಸರಿದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News