ಭಾರತದ ಮಹಿಳಾ ತಂಡ ಪ್ರಕಟ, ವಂದನಾ ನಾಯಕಿ

Update: 2016-11-12 17:16 GMT

 ಹೊಸದಿಲ್ಲಿ, ನ.12: ತಿಂಗಳಾಂತ್ಯದಲ್ಲಿ ಮೆಲ್ಬೋರ್ನ್‌ನಲ್ಲಿ ಆರಂಭವಾಗಲಿರುವ ಆಸ್ಟ್ರೇಲಿಯ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತೀಯ ಹಿರಿಯ ಮಹಿಳಾ ಹಾಕಿ ತಂಡವನ್ನು ಫಾರ್ವರ್ಡ್ ಆಟಗಾರ್ತಿ ವಂದನಾ ಕಟಾರಿಯಾ ನಾಯಕಿಯಾಗಿ ಮುನ್ನಡೆಸಲಿದ್ದಾರೆ.

 ಹಾಕಿ ಸರಣಿ ನ.23 ರಿಂದ 30ರ ತನಕ ನಡೆಯಲಿದೆ. ಈ ಸರಣಿಗೆ ಆಯ್ಕೆ ಮಾಡಲಾಗಿರುವ 18 ಸದಸ್ಯೆಯರನ್ನು ಒಳಗೊಂಡ ಭಾರತ ತಂಡಕ್ಕೆ ಡಿಫೆಂಡರ್ ಸುನೀತಾ ಲಾಕ್ರ ಉಪ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ರಜನಿ ಹಾಗೂ ಸವಿತಾ ಗೋಲ್‌ಕೀಪರ್‌ಗಳಾಗಿ ಮುಂದುವರಿಯಲಿದ್ದಾರೆ. ದೀಪಾ ಗ್ರೆಸ್ ಎಕ್ಕಾ,ಾ ಸಲಿಮಾ, ರಶ್ಮಿತಾ, ನವ್‌ದೀಪ್ ಹಾಗೂ ಸುನೀತಾ ಲಾಕ್ರಾ ಡಿಫೆಂಡರ್‌ಗಳಾಗಿ ಆಯ್ಕೆಯಾಗಿದ್ದಾರೆ.

ಮಿಡ್‌ಫೀಲ್ಡ್‌ನಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ರಾಣಿ, ದೀಪಿಕಾ, ನಿಕ್ಕಿ ಪ್ರಧಾನ್, ನವಜೋತ್ ಕೌರ್, ಮೋನಿಕಾ ಹಾಗೂ ಕರಿಶ್ಮಾ ಯಾದವ್ ಅವರಿದ್ದಾರೆ.

ಅನುಭವಿ ಆಟಗಾರ್ತಿ ಪೂನಮ್ ರಾಣಿ, ಅನುರಾಧ ದೇವಿ, ವಂದನಾ ಕಟಾರಿಯಾ, ಸೋನಿಕಾ ಹಾಗೂ ಪ್ರೀತಿ ದುಬೆ ಸ್ಟ್ರೈಕರ್ ವಿಭಾಗದಲ್ಲಿದ್ದಾರೆ.

ಇತ್ತೀಚೆಗೆ ನಡೆದ ಮಹಿಳೆಯರ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಫೈನಲ್‌ನಲ್ಲಿ ಚೀನಾವನ್ನು ಮಣಿಸಿ ಪ್ರಶಸ್ತಿ ಎತ್ತಿ ಹಿಡಿದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಭಾರತ ಈ ಬಾರಿ ಆಸ್ಟ್ರೇಲಿಯ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ. ಒಲಿಂಪಿಕ್ಸ್‌ಗೆ ಮೊದಲು ಆಸ್ಟ್ರೇಲಿಯ ಪ್ರವಾಸದಲ್ಲಿ ಭಾರತ ಕಳಪೆ ಪ್ರದರ್ಶನ ನೀಡಿತ್ತು.

ಮಹಿಳಾ ಹಾಕಿ ತಂಡ:

ಗೋಲ್‌ಕೀಪರ್‌ಗಳು: ಸವಿತಾ, ರಜನಿ.

ಡಿಫೆಂಡರ್‌ಗಳು: ದೀಪಾ ಎಕ್ಕಾ, ಸಲಿಮಾ ಟೆಟೆ, ಸುನೀತಾ ಲಾಕ್ರ(ಉಪ ನಾಯಕಿ), ರಶ್ಮಿತಾ ಮಿಂಝ್, ನವ್‌ದೀಪ್ ಕೌರ್.

ಮಿಡ್‌ಫೀಲ್ಡರ್‌ಗಳು: ನಿಕ್ಕಿ ಪ್ರಧಾನ್, ನವಜೋತ್ ಕೌರ್, ಕರಿಶ್ಮಾ ಯಾದವ್, ರಾಣಿ, ದೀಪಿಕಾ, ಮೋನಿಕಾ.

ಫಾರ್ವರ್ಡ್‌ಗಳು: ಪೂನಮ್ ರಾಣಿ, ಅನುರಾಧಾ ದೇವಿ, ವಂದನಾ ಕಟಾರಿಯ(ನಾಯಕಿ), ಪ್ರೀತಿ ದುಬೆ, ಸೋನಿಕಾ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News