ಮಕ್ಕಳಿಗೆ ಭದ್ರತಾ ವಿನಾಯಿತಿಗಾಗಿ ಪ್ರಯತ್ನಿಸಿಲ್ಲ: ಟ್ರಂಪ್
Update: 2016-11-16 21:05 IST
ವಾಶಿಂಗ್ಟನ್, ನ. 16: ತನ್ನ ಮಕ್ಕಳು ಎಲ್ಲಿ ಹೋಗಬೇಕಾದರೂ ಅವರನ್ನು ಭದ್ರತಾ ತಪಾಸಣೆಗೆ ಗುರಿಪಡಿಸಬಾರದು ಎಂಬುದಾಗಿ ತಾನು ಹೇಳಿಲ್ಲ ಎಂದು ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಭದ್ರತಾ ತಪಾಸಣೆಯಿಂದ ವಿನಾಯಿತಿ ದೊರೆತರೆ ಅವರು ರಹಸ್ಯ ದಾಖಲೆಗಳನ್ನೂ ನೋಡಬಹುದಾಗಿದೆ.
‘‘ನನ್ನ ಮಕ್ಕಳಿಗೆ ‘ಉನ್ನತ ಮಟ್ಟದ ಭದ್ರತಾ ತಪಾಸಣೆ ವಿನಾಯಿತಿ’ಯನ್ನು ದೊರಕಿಸಿಕೊಡಲು ನಾನು ಯತ್ನಿಸಿಲ್ಲ. ಇದು ಸುಳ್ಳು ವರದಿ’’ ಎಂದು ನ್ಯೂಯಾರ್ಕ್ ರಿಯಲ್ ಎಸ್ಟೇಟ್ ದೊರೆ ಟ್ವಿಟರ್‌ನಲ್ಲಿ ಹೇಳಿದ್ದಾರೆ.
ಅಧ್ಯಕ್ಷರು ತಮ್ಮ ಆಡಳಿತದಲ್ಲಿ ಕುಟುಂಬ ಸದಸ್ಯರನ್ನು ಸೇರಿಸಿಕೊಳ್ಳಬಾರದು ಎಂಬುದಾಗಿ ಅಮೆರಿಕದ ಕಾನೂನು ಹೇಳುತ್ತದೆ.