×
Ad

ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ರಶ್ಯ ಹಿಂದಕ್ಕೆ

Update: 2016-11-16 21:19 IST

ಮಾಸ್ಕೊ, ನ. 16: ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ರಶ್ಯವನ್ನು ಹಿಂದಕ್ಕೆ ಪಡೆಯುವ ಆದೇಶಕ್ಕೆ ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸಹಿ ಹಾಕಿದ್ದಾರೆ.ಜನಾಂಗೀಯ ಹತ್ಯೆ ಮತ್ತು ಮಾನವತೆಯ ವಿರುದ್ಧದ ಅಪರಾಧಗಳ ಬಗ್ಗೆ ಈ ನ್ಯಾಯಾಲಯವು ವಿಚಾರಣೆ ನಡೆಸುತ್ತದೆ.

ರಶ್ಯವು ‘ಕ್ರೈಮಿಯವನ್ನು ತಾತ್ಕಾಲಿಕವಾಗಿ ಆಕ್ರಮಿಸಿರುವುದು’ ಹಾಗೂ ‘ಕೆಲವು ಕ್ರೈಮಿಯನ್ನರ ವಿರುದ್ಧ ತಾರತಮ್ಯ’ ನಡೆಸುವುದನ್ನು ಖಂಡಿಸುವ ನಿರ್ಣಯವನ್ನು ವಿಶ್ವಸಂಸ್ಥೆಯ ಮಹಾಧಿವೇಶನದ ಮಾನವಹಕ್ಕುಗಳ ಸಮಿತಿಯು ಅನುಮೋದಿಸಿದ ಒಂದು ದಿನದ ಬಳಿಕ ಪುಟಿನ್‌ರ ಆದೇಶ ಹೊರಬಿದ್ದಿದೆ.

  ಆದೇಶವನ್ನು ಕ್ರೆಮ್ಲಿನ್‌ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.ಅವಸರವಸರವಾಗಿ ನಡೆಸಿದ ಜನಮತಗಣನೆಯ ಬಳಿಕ, ರಶ್ಯ 2014ರ ಮಾರ್ಚ್‌ನಲ್ಲಿ ಕ್ರೈಮಿಯವನ್ನು ಯುಕ್ರೇನ್‌ನಿಂದ ಕಸಿದುಕೊಂಡು ತನ್ನೊಂದಿಗೆ ಸೇರ್ಪಡೆ ಮಾಡಿಕೊಂಡಿತ್ತು.ಕೆನ್ಯದ ರಾಜಧಾನಿ ನೈರೋಬಿ ಸಮೀಪದ ನಗಾಂಗ್‌ನಲ್ಲಿ ಸುಮಾರು 5,500 ಅಕ್ರಮ ಬಂದೂಕುಗಳನ್ನು ಸುಟ್ಟು ಹಾಕುವುದಕ್ಕಾಗಿ ಅವುಗಳ ರಾಶಿಗೆ ಪೆಟ್ರೋಲ್ ಸುರಿಯುತ್ತಿರುವುದು.ಅಥೆನ್ಸ್‌ನ ಮ್ಯಾಕ್ಸಿಮೋಸ್ ಮ್ಯಾನ್ಶನ್‌ನಲ್ಲಿ ಮಂಗಳವಾರ ಗ್ರೀಸ್ ಪ್ರಧಾನಿ ಅಲೆಕ್ಸಿಸ್ ಸಿಪ್ರಾಸ್‌ರನ್ನು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಭೇಟಿಯಾದರು.

ರಿಯಾದ್‌ನ ಬೀದಿಯೊಂದರಲ್ಲಿ ಎನ್‌ಸೈಕ್ಲೊಪೀಡಿಯ ಮಾರಾಟ ಮಾಡುವುದಕ್ಕಾಗಿ ಮನೆಯೊಂದರ ಬಾಗಿಲು ಬಡಿಯುತ್ತಿರುವ ಜಾನ್ ಗುಂಟಿ.
ಪಟಿಯಾಲದ ನಭ ರಸ್ತೆಯಲ್ಲಿ ಬುಧವಾರ ಪಂಜಾಬ್ ಸರಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ವೇಳೆ, ಭಾಕ್ರಾ ಕಾಲುವೆಗೆ ಹಾರಿದ ಸರಕಾರಿ ರಾಜಿಂದರ್ ಆಸ್ಪತ್ರೆಯ ನರ್ಸ್‌ಗಳನ್ನು ರಕ್ಷಿಸುತ್ತಿರುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News