ಫೋಕ್ಸ್‌ವ್ಯಾಗನ್‌ನಲ್ಲಿ 30,000 ಉದ್ಯೊಗ ಕಡಿತ
Update: 2016-11-18 19:50 IST
ಫ್ರಾಂಕೆನ್‌ತಾಲ್ (ಜರ್ಮನಿ), ನ. 18: 2020ರ ವೇಳೆಗೆ 30,000 ಉದ್ಯೋಗಗಳನ್ನು ಕಡಿತ ಮಾಡಲು ಜರ್ಮನಿಯ ಬೃಹತ್ ಕಾರು ತಯಾರಕ ಕಂಪೆನಿ ಫೋಕ್ಸ್‌ವ್ಯಾಗನ್ ಉದ್ದೇಶಿಸಿದೆ.
ಡೀಸೆಲ್ ಎಂಜಿನ್ ಮಾಲಿನ್ಯ ತಪಾಸಣೆ ವಂಚನೆ ಹಗರಣದಿಂದ ಚೇತರಿಸಿಕೊಳ್ಳುವ ಯೋಜನೆಯ ಭಾಗವಾಗಿ, ಬೃಹತ್ ಪ್ರಮಾಣದಲ್ಲಿ ಉಳಿತಾಯ ನಡೆಸಲು ಅದು ಈ ಕ್ರಮ ತೆಗೆದುಕೊಂಡಿದೆ ಎಂದು ಜರ್ಮನಿಯ ವಾಣಿಜ್ಯ ದೈನಿಕ ‘ಹ್ಯಾಂಡಲ್ಸ್‌ಬ್ಲಾಟ್’ ವರದಿ ಮಾಡಿದೆ.
ಉದ್ಯೋಗ ಕಡಿತದ ಮೂರನೆ ಎರಡು ಭಾಗ ಜರ್ಮನಿಯಲ್ಲಿರುವ ಫೋಕ್ಸ್‌ವ್ಯಾಗನ್ ಸ್ಥಾವರಗಳಲ್ಲಿ ಜಾರಿಗೆ ತರಲಾಗುವುದು ಹಾಗೂ ಇತರ ಉದ್ಯೋಗ ಕಡಿತಗಳು ಉತ್ತರ ಅಮೆರಿಕ ಮತ್ತು ಬ್ರೆಝಿಲ್‌ಗಳಲ್ಲಿ ಜಾರಿಯಾಗುತ್ತವೆ ಎಂದು ಪತ್ರಿಕೆ ತಿಳಿಸಿದೆ.