ಹಮೀದ್‌ಗೆ ಗಾಯ, ಸ್ವದೇಶಕ್ಕೆ ವಾಪಸ್
Update: 2016-11-29 23:33 IST
ಮೊಹಾಲಿ, ನ.29: ಯುವ ಆಟಗಾರ ಹಸೀಬ್ ಹಮೀದ್ ಶಸ್ತ್ರಚಿಕಿತ್ಸೆಗಾಗಿ ಸ್ವದೇಶಕ್ಕೆ ವಾಪಸಾಗಲಿದ್ದಾರೆ ಎಂದು ಇಂಗ್ಲೆಂಡ್ ನಾಯಕ ಅಲಿಸ್ಟರ್ ಕುಕ್ ಮಂಗಳವಾರ ದೃಢಪಡಿಸಿದ್ದಾರೆ.
19 ರ ಹರೆಯದ ಹಮೀದ್ ಬುಧವಾರ ಮೊಹಾಲಿಯಲ್ಲಿ ನಡೆದ 3ನೆ ಟೆಸ್ಟ್‌ನ 4ನೆ ದಿನದಾಟದಲ್ಲಿ ಅಜೇಯ 59 ರನ್ ಗಳಿಸಿ ತಂಡವನ್ನು ಆಧರಿಸಿದ್ದರು. ಹಮೀದ್‌ಗೆ ಮೊಹಾಲಿಯ ಮೊದಲ ಇನಿಂಗ್ಸ್ ಆಡುತ್ತಿದ್ದಾಗ ಕೈಗೆ ಚೆಂಡು ತಾಗಿ ಗಾಯವಾಗಿತ್ತು. ರಾಜ್‌ಕೋಟ್‌ನಲ್ಲಿ ನಡೆದ ಚೊಚ್ಚಲ ಟೆಸ್ಟ್‌ನಲ್ಲಿ 82 ರನ್ ಗಳಿಸಿದ್ದ ಹಮೀದ್ ವಿಶಾಖಪಟ್ಟಣದಲ್ಲಿ ಇಂಗ್ಲೆಂಡ್ ಪಂದ್ಯ ಡ್ರಾಗೊಳಿಸಲು ಮುಖ್ಯ ಪಾತ್ರವಹಿಸಿದ್ದರು.
ಹಮೀದ್ ಸ್ವದೇಶಕ್ಕೆ ವಾಪಸಾಗಲಿದ್ದಾರೆ. ಅವರು ಭಾರತ ವಿರುದ್ಧ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಅವರು ಮತ್ತೊಮ್ಮೆ ಇಂಗ್ಲೆಂಡ್ ಪರ ಆಡಲಿದ್ದಾರೆ ಎಂದು ಕುಕ್ ಖಚಿತಪಡಿಸಿದರು.