ಮಹಿಳಾ ಏಷ್ಯಕಪ್ ಕ್ರಿಕೆಟ್‌ನಲ್ಲಿ ಭಾರತ ಚಾಂಪಿಯನ್
Update: 2016-12-04 15:14 IST
ಬಾಂಕಾಕ್, ಡಿ.4: ಮಹಿಳಾ ಏಷ್ಯಕಪ್ ಟ್ವೆಂಟಿ-20 ಟೂರ್ನಮೆಂಟ್‌ನ ಫೈನಲ್‌ನಲ್ಲಿ ಭಾರತ ಇಂದು ಪಾಕಿಸ್ತಾನ ವಿರುದ್ಧ 17 ರನ್‌ಗಳ ರೋಚಕ ಜಯ ಗಳಿಸಿದೆ.
ಗೆಲುವಿಗೆ 122 ರನ್‌ಗಳ ಸವಾಲನ್ನು ಪಡೆದ ಪಾಕಿಸ್ತಾನದ ಮಹಿಳಾ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 104 ರನ್ ಗಳಿಸಲಷ್ಟೇ ಶಕ್ತವಾಗಿದೆ.
ಭಾರತದ ಸಂಘಟಿತ ದಾಳಿಯ ಮುಂದೆ ಪಾಕಿಸ್ತಾನದ ಆಟಗಾರ್ತಿಯರು ಗೆಲುವಿನ ಗುರಿ ತಲುಪುವಲ್ಲಿ ಎಡವಿದ್ದಾರೆ. ಇದಕ್ಕೂ ಮೊದಲು ಭಾರತ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 121 ರನ್ ಗಳಿಸಿತ್ತು. ಆರಂಭಿಕ ಆಟಗಾರ್ತಿ ಮಿಥಾಲಿ ರಾಜ್ ಔಟಾಗದೆ 73 ರನ್(84ನಿ, 65ಎ, 7ಬೌ,1ಸಿ) ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.