×
Ad

ಅಭಿಮಾನಿಯ ಶಸ್ತ್ರಚಿಕಿತ್ಸೆಗೆ ನಿಧಿ ಸಂಗ್ರಹಿಸಲು ಮಿಸ್ಬಾ ನಿರ್ಧಾರ

Update: 2016-12-06 23:25 IST

ಕರಾಚಿ, ಡಿ.6: ಪಾಕಿಸ್ತಾನದ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಮಿಸ್ಬಾವುಲ್ ಹಕ್ ಮೈದಾನದೊಳಗೆ ಮಾತ್ರ ಸುದ್ದಿಯಾಗುತ್ತಿಲ್ಲ. ಮೈದಾನದ ಹೊರಗೂ ಸತ್ಕಾರ್ಯದ ಮೂಲಕ ಸುದ್ದಿಯಾಗುತ್ತಿದ್ದಾರೆ. ಮಿಸ್ಬಾ ತಮ್ಮ ಅಭಿಮಾನಿಯೋರ್ವನ ಶಸ್ತ್ರಚಿಕಿತ್ಸೆಗಾಗಿ 3 ಲಕ್ಷ ರೂ. ನಿಧಿ ಸಂಗ್ರಹಿಲು ನಿರ್ಧರಿಸಿದ್ದಾರೆ.

ಮಿಸ್ಬಾವುಲ್ ಹಕ್ರ 16ರ ಪ್ರಾಯದ ಅಭಿಮಾನಿ ರೊಹಾನ್ಸ್ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ವರದಿಯಾಗಿದೆ.

 ರೊಹಾನ್ಸ್‌ಗೆ ಚಿಕಿತ್ಸಾ ವೆಚ್ಚದ ಅರ್ಧದಷ್ಟು ಹಣ ಭರಿಸಲು ನಿಧಿ ಸಂಗ್ರಹಕ್ಕಾಗಿ ತನ್ನ ಬ್ಯಾಟ್ ಹಾಗೂ ಶರ್ಟ್‌ನ್ನು ಹರಾಜಿಗಿಡಲು ಮಿಸ್ಬಾವುಲ್‌ಹಕ್ ನಿರ್ಧರಿಸಿದ್ದಾರೆ.

ಮಿಸ್ಬಾ 2015ರ ವಿಶ್ವಕಪ್‌ನ ವೇಳೆ ರೋಹಾನ್‌ರನ್ನು ಭೇಟಿಯಾಗಿದ್ದರು. ಡಿ.15 ರಿಂದ ಆರಂಭವಾಗಲಿರುವ ಆಸ್ಟ್ರೇಲಿಯ ವಿರುದ್ಧ ಮೂರು ಪಂದ್ಯಗಳ ಸರಣಿಯಲ್ಲಿ ಭಾಗವಹಿಸಲು ಆಸ್ಟ್ರೇಲಿಯಕ್ಕೆ ತೆರಳಲಿರುವ ಮಿಸ್ಬಾ ಈ ಬಾರಿ ರೋಹಾನ್‌ರನ್ನು ಭೇಟಿಯಾಗಲು ಸಾಧ್ಯವಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News