×
Ad

ಡಿ.19ಕ್ಕೆ ಪ್ಲೆಸಿಸ್ ಮೇಲ್ಮನವಿ ವಿಚಾರಣೆ

Update: 2016-12-06 23:27 IST

ಜೋಹಾನ್ಸ್‌ಬರ್ಗ್, ಡಿ.6: ಚೆಂಡು ವಿರೂಪ ಪ್ರಕರಣದಲ್ಲಿ ಶಿಕ್ಷೆ ಎದುರಿಸುತ್ತಿರುವ ದಕ್ಷಿಣ ಆಫ್ರಿಕದ ಬ್ಯಾಟ್ಸ್‌ಮನ್ ಎಫ್‌ಡು ಪ್ಲೆಸಿಸ್ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ಡಿ.19 ರಂದು ನಡೆಸಲು ಐಸಿಸಿ ನಿರ್ಧರಿಸಿದೆ.

 ಮೈಕಲ್ ಬೆಲಾಫ್ ನೇತೃತ್ವದ ನ್ಯಾಯಾಧೀಶರ ಸಮಿತಿ ಮೇಲ್ಮನವಿ ವಿಚಾರಣೆ ನಡೆಸಲಿದೆ. ಬೆಲಾಫ್ ಐಸಿಸಿ ನೀತಿ ಸಂಹಿತೆ ಆಯೋಗದ ಅಧ್ಯಕ್ಷರಾಗಿದ್ದಾರೆ. 2010ರಲ್ಲಿ ಲಾರ್ಡ್ಸ್ ಟೆಸ್ಟ್‌ನಲ್ಲಿ ನಡೆದ ಪಾಕಿಸ್ತಾನದ ಸಲ್ಮಾನ್ ಬಟ್, ಮುಹಮ್ಮದ್ ಆಸಿಫ್ ಹಾಗೂ ಮುಹಮ್ಮದ್ ಆಮಿರ್ ಭಾಗಿಯಾಗಿದ್ದ ಸ್ಪಾಟ್ ಫಿಕ್ಸಿಂಗ್ ಪ್ರಕರಣದ ವಿಚಾರಣೆಗೆ ಐಸಿಸಿ ನೇಮಿಸಿದ್ದ ಸ್ವತಂತ್ರ ತ್ರಿಸದಸ್ಯ ಸಮಿತಿಯಲ್ಲೂ ಬೆಲಾಫ್ ಅವರಿದ್ದರು.

ನ.22 ರಂದು ಐಸಿಸಿ ಮ್ಯಾಚ್ ರೆಫರಿ ಆ್ಯಂಡಿ ಪೈಕ್ರಾಫ್ಟ್ ಚೆಂಡು ವಿರೂಪ ಪ್ರಕರಣದಲ್ಲಿ ಡು ಪ್ಲೆಸಿಸ್ ತಪ್ಪಿತಸ್ಥನೆಂದು ತೀರ್ಪು ನೀಡಿ ಆಸ್ಟ್ರೇಲಿಯ ವಿರುದ್ಧ ಹೊಬರ್ಟ್‌ನಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದ ಸಂಪೂರ್ಣ ಶುಲ್ಕ ಪಾವತಿಸುವಂತೆ ಆದೇಶಿಸಿದ್ದರು. ಟಿವಿ ಫುಟೇಜ್‌ನ್ನು ಆಧರಿಸಿ ಐಸಿಸಿ ಮುಖ್ಯ ಕಾರ್ಯಾಧ್ಯಕ್ಷ ಡೇವಿಡ್ ರಿಚರ್ಡ್‌ಸನ್ ಪ್ಲೆಸಿಸ್ ವಿರುದ್ಧ ಶಿಕ್ಷೆಯನ್ನು ಎತ್ತಿ ಹಿಡಿದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News