ಕ್ರಿಕೆಟ್ ಫೀಲ್ಡ್‌ನಲ್ಲೂ ‘ರೆಡ್ ಕಾರ್ಡ್ ’ ಬರಲಿದೆ.....!
Update: 2016-12-08 18:28 IST
ಮುಂಬೈ, ಡಿ.8: ಹಾಕಿ ಮತ್ತು ಫುಟ್ಬಾಲ್‌ನಲ್ಲಿ ನಿಯಮವನ್ನು ಉಲ್ಲಂಘಿಸಿದವರಿಗೆ ರೆಡ್ ಕಾರ್ಡ್ ನೀಡುವಂತೆ ಮುಂದಿನ ವರ್ಷದಿಂದ ಕ್ರಿಕೆಟ್ ಫೀಲ್ಡ್‌ಗೂ ಆಟಗಾರರನ್ನು ಹದ್ದುಬಸ್ತಿನಲ್ಲಿಡಲು ರೆಡ್ ಕಾರ್ಡ್ ನೀಡುವ ನಿಯಮ ಜಾರಿಗೆ ಬರಲಿದೆ.
ಅಕ್ಟೋಬರ್ 1, 2017ರಿಂದ ರೆಡ್ ಕಾರ್ಡ್ ನಿಯಮ ಅನುಷ್ಠಾನಗೊಳ್ಳಲಿದೆ. ಅಂಪೈರ್‌ಗೆ ಬೆದರಿಕೆ, ಕ್ರಿಕೆಟ್ ಅಧಿಕಾರಿ, ಪ್ರೇಕ್ಷರರ ಜೊತೆ ಆಟಗಾರ ಜಗಳವಾಡಿದರೆ ರೆಡ್ ಕಾರ್ಡ್ ನೀಡಿ ಅವರನ್ನು ಹೊರಗಟ್ಟಲಾಗುವುದು.
ರೆಡ್ ಕಾರ್ಡ್, ಬ್ಯಾಟ್ ಬಳಕೆಯ ಮೇಲೆ ನಿರ್ಬಂಧ ವಿಧಿಸುವ ಬಗ್ಗೆ ಮೆಲ್ಬೋರ್ನ್ ಕ್ರಿಕೆಟ್ ಸಂಸ್ಥೆ ಬುಧವಾರ ಮತ್ತು ಗುರುವಾರ ನಡೆದ ಸಭೆಯಲ್ಲಿ (ಎಂಸಿಸಿ) ನಿರ್ಧಾರ ಕೈಗೊಂಡಿದೆ.ಲಂಡನ್‌ನ ಲಾರ್ಡ್ಸ್‌ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಎಂಸಿಸಿ ಆಟದ ನಿಯಮವನ್ನು ರೂಪಿಸುವ ಅಧಿಕಾರ ಹೊಂದಿದೆ.