×
Ad

ಬಿಸಿಸಿಐ-ಲೋಧಾ ಸಮಿತಿ ಪ್ರಕರಣ: ವಿಚಾರಣೆ ಮುಂದೂಡಿದ ಸುಪ್ರೀಂ

Update: 2016-12-09 23:13 IST

ಹೊಸದಿಲ್ಲಿ, ಡಿ.9: ಬಿಸಿಸಿಐ ಹಾಗೂ ಲೋಧಾ ಸಮಿತಿಯ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ವಾರದಲ್ಲಿ ಎರಡನೆ ಬಾರಿ ಮುಂದೂಡಿದೆ.

ಲೋಧಾ ಸಮಿತಿ ಶಿಫಾರಸಿಗೆ ಸಂಬಂಧಿಸಿ ಬಿಸಿಸಿಐ ನಿಲುವಿನ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯಬೇಕಾಗಿತ್ತು. ಆದರೆ, ಶುಕ್ರವಾರ ಸುಪ್ರೀಂಕೋರ್ಟ್‌ನಲ್ಲಿ ಮತ್ತೊಂದು ವಿಚಾರಣೆಯು ದೀರ್ಘಕಾಲ ನಡೆದ ಕಾರಣ ಬಿಸಿಸಿಐ-ಲೋಧಾ ಸಮಿತಿಯ ವಿಚಾರಣೆಯನ್ನು ಡಿ.14ಕ್ಕೆ ನ್ಯಾಯಾಲಯ ಮುಂದೂಡಿದೆ.

 ಸುಪ್ರೀಂಕೋರ್ಟ್ ಡಿ.5 ರಂದು ನಡೆಯಬೇಕಾಗಿದ್ದ ವಿಚಾರಣೆಯನ್ನು ಡಿ.9ಕ್ಕೆ ಮುಂದೂಡಿತ್ತು. ಇದೀಗ 2ನೆ ಬಾರಿ ಮುಂದೂಡಲಾಗಿದೆ. ಸುಪ್ರೀಂಕೋರ್ಟ್ ಅ.21 ರಂದು ನಡೆಸಿರುವ ವಿಚಾರಣೆಯ ವೇಳೆ ಬಿಸಿಸಿಐ ಮಂಜೂರು ಮಾಡಿರುವ ಒಪ್ಪಂದವನ್ನು ಪರಿಶೀಲಿಸಲು ಸ್ವತಂತ್ರ ಆಡಿಟರ್ ಸಮಿತಿ ರಚಿಸುವಂತೆ ಲೋಧಾ ಸಮಿತಿಗೆ ಸೂಚಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News