×
Ad

ಭಾರತೀಯ ಜಿಮ್ನಾಸ್ಟಿಕ್ಸ್‌ಗೆ ದೀಪಾ ಕರ್ಮಾಕರ್ ರಾಯಭಾರಿ: ಪ್ರಸೂನ್ ಬ್ಯಾನರ್ಜಿ ಶಿಫಾರಸು

Update: 2016-12-09 23:21 IST

ಹೊಸದಿಲ್ಲಿ, ಡಿ.9: ಭಾರತೀಯ ಜಿಮ್ನಾಸ್ಟಿಕ್ಸ್‌ಗೆ ರಿಯೋ ಒಲಿಂಪಿಯನ್ ದೀಪಾ ಕರ್ಮಾಕರ್‌ರನ್ನು ರಾಯಭಾರಿಯನ್ನಾಗಿ ನೇಮಿಸಬೇಕು ಎಂದು ಲೋಕಸಭಾ ಸದಸ್ಯ ಭಾರತದ ಫುಟ್ಬಾಲ್ ದಂತಕತೆ ಪ್ರಸೂನ್ ಬ್ಯಾನರ್ಜಿ ಕ್ರೀಡಾ ಸಚಿವ ವಿಜಯ್ ಗೋಯೆಲ್‌ಗೆ ಮನವಿ ಮಾಡಿದ್ದಾರೆ.

‘‘ದೀಪಾ ಕರ್ಮಾಕರ್ 2016ರ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ ಆಗಿ ಭಾರತವನ್ನು ಪ್ರತಿನಿಧಿಸಿರುವುದು ಮಾತ್ರವಲ್ಲ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ ಭಾರತದ ಮೊತ್ತ ಮೊದಲ ಮಹಿಳಾ ಜಿಮ್ನಾಸ್ಟಿಕ್ ಆಗಿದ್ದರು. 52 ವರ್ಷಗಳ ಬಳಿಕ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಮೊದಲ ಜಿಮ್ನಾಸ್ಟ್ ಪಟು ಆಗಿದ್ದರು’’ ಎಂದು ಕ್ರೀಡಾ ಸಚಿವರಿಗೆ ಬರೆದ ಪತ್ರದಲ್ಲಿ ಮುಖರ್ಜಿ ಹೇಳಿದ್ದಾರೆ.

‘‘ ಈ ಚಿನ್ನದ ಹುಡುಗಿಯನ್ನು ಭಾರತೀಯ ಜಿಮ್ನಾಸ್ಟಿಕ್ಸ್‌ನ ರಾಯಭಾರಿ ಆಗಿ ನೇಮಕ ಮಾಡಬೇಕೆಂದು ನಿಮ್ಮಲ್ಲಿ ನನ್ನ ನಮ್ರ ವಿನಂತಿ. ಈ ಮೂಲಕ ಆಕೆ ತನ್ನ ಜೀವನದಲ್ಲಿ ಮತ್ತಷ್ಟು ಸಾಧಿಸಲು ಉತ್ತೇಜನ ನೀಡಬೇಕು’’ ಎಂದು ಮುಖರ್ಜಿ ಕ್ರೀಡಾ ಸಚಿವರಲ್ಲಿ ವಿನಂತಿಸಿದ್ದಾರೆ.

ಈ ವರ್ಷಾರಂಭದಲ್ಲಿ ನಡೆದ ರಿಯೋ ಗೇಮ್ಸ್‌ನಲ್ಲಿ ಕರ್ಮಾಕರ್ ಮಹಿಳೆಯರ ವೋಲ್ಟ್ ಜಿಮ್ನಾಸ್ಟಿಕ್ಸ್‌ನಲ್ಲಿ ನಾಲ್ಕನೆ ಸ್ಥಾನ ಪಡೆದಿದ್ದರು. 2014ರಲ್ಲಿ ಗ್ಲಾಸ್ಗೋದಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News