×
Ad

ಏಕದಿನ ಸರಣಿ ಆಡಲಿರುವ ಭಾರತ-ಇಂಗ್ಲೆಂಡ್ ಜೂನಿಯರ್ ತಂಡ

Update: 2016-12-09 23:23 IST

ಹೊಸದಿಲ್ಲಿ, ಡಿ.9: ಭಾರತ ಹಾಗೂ ಇಂಗ್ಲೆಂಡ್‌ನ ಅಂಡರ್-19 ತಂಡಗಳು ಐದು ಪಂದ್ಯಗಳ ಏಕದಿನ ಸರಣಿ ಆಡಲು ಸಜ್ಜಾಗಿವೆ. ಉಭಯ ತಂಡಗಳ ನಡುವಿನ ಏಕದಿನ ಸರಣಿ ಮುಂದಿನ ವರ್ಷದ ಜನವರಿ 30 ರಂದು ಆರಂಭವಾಗಲಿದೆ. ಆ ಬಳಿಕ ಎರಡು ದಿನಗಳ ಕಾಲ ಚತುರ್ದಿನ ಪಂದ್ಯಗಳು ನಡೆಯುತ್ತವೆ.

 ಮುಂಬೈ ಹಾಗೂ ಚೆನ್ನೈನಲ್ಲಿ ನಡೆಯಲಿರುವ ಸರಣಿಯ ವೇಳಾಪಟ್ಟಿಯನ್ನು ಬಿಸಿಸಿಐ ಹಾಗೂ ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ(ಇಸಿಬಿ) ಶುಕ್ರವಾರ ಘೋಷಿಸಿದೆ.

ಏಕದಿನ ಸರಣಿಯು ಮುಂಬೈನಲ್ಲಿ ನಡೆಯುವುದು. ಮೊದಲ, ನಾಲ್ಕನೆ ಹಾಗೂ ಐದನೆ ಪಂದ್ಯಗಳು ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುವುದು, ಎರಡನೆ ಹಾಗೂ ಐದನೆ ಪಂದ್ಯ ಬ್ರೆಬೋರ್ನ್ ಸ್ಟೇಡಿಯಂನ ಸಿಸಿಐನಲ್ಲಿ ನಡೆಯಲಿದೆ.

ಎರಡು ದಿನಗಳ ಕಾಲ ನಡೆಯುವ ಚತುರ್ದಿನ ಪಂದ್ಯ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದೆ ಎಂದು ಬಿಸಿಸಿಐ ಪ್ರಕಟನೆಯೊಂದರಲ್ಲಿ ತಿಳಿಸಿದೆ. ವೇಳಾಪಟ್ಟಿ ಇಂತಿದೆ:

ಪ್ರಥಮ ಏಕದಿನ: ಜ.30(ವಾಂಖೆಡೆ ಸ್ಟೇಡಿಯಂ, ಮುಂಬೈ)

2ನೆ ಏಕದಿನ: ಫೆ.1(ಸಿಸಿಐ, ಮುಂಬೈ)

3ನೆ ಏಕದಿನ: ಫೆ.3(ಸಿಸಿಐ, ಮುಂಬೈ)

4ನೆ ಏಕದಿನ: ಫೆ.6(ವಾಂಖೆಡೆ ಸ್ಟೇಡಿಯಂ, ಮುಂಬೈ)

5ನೆ ಏಕದಿನ: ಫೆ.8(ವಾಂಖೆಡೆ ಸ್ಟೇಡಿಯಂ, ಮುಂಬೈ)

ಮೊದಲ ನಾಲ್ಕು ದಿನಗಳ ಪಂದ್ಯ: ಫೆ.13-16(ಚಿದಂಬರಂ ಸ್ಟೇಡಿಯಂ, ಚೆನ್ನೈ)

2ನೆ ನಾಲ್ಕು ದಿನಗಳ ಪಂದ್ಯ: ಫೆ.21-24(ಚಿದಂಬರಂ ಸ್ಟೇಡಿಯಂ, ಚೆನ್ನೈ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News