ಜಯಂತ್ ಯಾದವ್ ಚೊಚ್ಚಲ ಶತಕ

Update: 2016-12-11 17:33 GMT

ಮುಂಬೈ, ಡಿ.11: ಜಯಂತ್ ಯಾದವ್ ಇಂಗ್ಲೆಂಡ್‌ನ ವಿರುದ್ಧ ರವಿವಾರ ಇಲ್ಲಿ ನಡೆದ ನಾಲ್ಕನೆ ಟೆಸ್ಟ್‌ನ 4ನೆ ದಿನದಾಟದಲ್ಲಿ ಚೊಚ್ಚಲ ಶತಕ ಬಾರಿಸಿದ್ದಾರೆ. ಯಾದವ್ ತಾನಾಡಿದ 3ನೆ ಟೆಸ್ಟ್ ಪಂದ್ಯದಲ್ಲಿ ಈ ಸಾಧನೆ ಮಾಡುವ ಮೂಲಕ ಭಾರತ ಪಂದ್ಯದಲ್ಲಿ ಬಿಗಿ ಹಿಡಿತ ಸಾಧಿಸಲು ನೆರವಾಗಿದ್ದಾರೆ.

ಬಲಗೈ ದಾಂಡಿಗ ಯಾದವ್ ಮೊಹಾಲಿಯಲ್ಲಿ ಇಂಗ್ಲೆಂಡ್‌ನ ವಿರುದ್ಧ ಅರ್ಧಶತಕ ಬಾರಿಸಿದ್ದರು. ರವಿವಾರ ಇಲ್ಲಿ ನಡೆದ ಪಂದ್ಯದಲ್ಲಿ ಶತಕ ಬಾರಿಸಿ ಹೊಸ ದಾಖಲೆ ಬರೆದರು.

ಆಲ್‌ರೌಂಡರ್ ಯಾದವ್ 9ನೆ ಕ್ರಮಾಂಕದಲ್ಲಿ ಶತಕ ಬಾರಿಸಿದ ಭಾರತದ ಮೊದಲ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾದರು. ಮಾತ್ರವಲ್ಲ ನಾಯಕ ವಿರಾಟ್ ಕೊಹ್ಲಿ ಅವರೊಂದಿಗೆ 8ನೆ ವಿಕೆಟ್‌ಗೆ 241 ರನ್ ಸೇರಿಸಿ ಹೊಸ ದಾಖಲೆ ಬರೆದರು. 20 ವರ್ಷಗಳ ಹಿಂದಿನ ಭಾರತದ ದಾಖಲೆಯನ್ನು ಮುರಿದರು. 26ರ ಹರೆಯದ ಯಾದವ್‌ಗೆ ಚೊಚ್ಚಲ ಟೆಸ್ಟ್ ಸರಣಿಯು ಸ್ಮರಣೀಯ ಎನಿಸಿಕೊಂಡಿದೆ.

ಹೊಸದಿಲ್ಲಿಯಲ್ಲಿ ಜನಿಸಿದ್ದ ಯಾದವ್ ಈ ವರ್ಷದ ಅಕ್ಟೋಬರ್ 9ರಂದು ನ್ಯೂಝಿಲೆಂಡ್ ವಿರುದ್ಧ ಏಕದಿನ ಅಂತಾರಾಷ್ಟ್ರೀಯ ಪಂದ್ಯಕ್ಕೆ ಕಾಲಿಟ್ಟಿದ್ದರು. ಚೊಚ್ಚಲ ಏಕದಿನದಲ್ಲಿ ಒಂದು ರನ್ ಗಳಿಸಿ ಒಂದು ವಿಕೆಟ್ ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News