×
Ad

ಐದನೆ ಟೆಸ್ಟ್: ಇಂಗ್ಲೆಂಡ್ 284/4

Update: 2016-12-16 16:48 IST

ಚೆನ್ನೈ, ಡಿ.16: ಮಧ್ಯಮ ಕ್ರಮಾಂಕದ ದಾಂಡಿಗ ಮೊಯಿನ್ ಅಲಿ(ಅಜೇಯ 120) ಹಾಗೂ ಜೋ ರೂಟ್(88 ರನ್) ಅವರ ಅಮೋಘ ಪ್ರದರ್ಶನದ ನೆರವಿನಿಂದ ಇಂಗ್ಲೆಂಡ್ ತಂಡ ಭಾರತ ವಿರುದ್ಧದ ಐದನೆ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 284 ರನ್ ಕಲೆ ಹಾಕಿದೆ.

  ಶುಕ್ರವಾರ ಇಲ್ಲಿ ಆರಂಭವಾದ ಕೊನೆಯ ಟೆಸ್ಟ್‌ನಲ್ಲಿ ಟಾಸ್ ಜಯಿಸಿದ ಇಂಗ್ಲೆಂಡ್ ನಾಯಕ ಅಲಿಸ್ಟರ್ ಕುಕ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಆದರೆ, ಆಂಗ್ಲರು 21 ರನ್ ಗಳಿಸುವಷ್ಟರಲ್ಲಿ ಇಬ್ಬರೂ ಆರಂಭಿಕ ಆಟಗಾರರಾದ ಕುಕ್(10) ಹಾಗೂ ಜೆನ್ನಿಂಗ್ಸ್(1) ವಿಕೆಟ್‌ನ್ನು ಕಳೆದುಕೊಂಡಿತು.

ಆಗ 3ನೆ ವಿಕೆಟ್‌ಗೆ 146 ರನ್ ಜೊತೆಯಾಟ ನಡೆಸಿದ ರೂಟ್(88 ರನ್, 144 ಎಸೆತ, 10 ಬೌಂಡರಿ) ಹಾಗೂ ಮೊಯಿನ್ ಅಲಿ(ಅಜೇಯ 120 ರನ್, 222 ಎಸೆತ, 12 ಬೌಂಡರಿ) ತಂಡವನ್ನು ಆಧರಿಸಿದರು. ರೂಟ್ 88 ರನ್ ಗಳಿಸಿ ಜಡೇಜಗೆ ವಿಕೆಟ್ ಒಪ್ಪಿಸಿ ಶತಕವಂಚಿತರಾದರು.

ರೂಟ್ ಔಟಾದ ಬಳಿಕ ಅಲಿ ಅವರು ಬೈರ್‌ಸ್ಟೋವ್(49 ರನ್) ಅವರೊಂದಿಗೆ ಕೈಜೋಡಿಸಿದರು. ಈ ಜೋಡಿ 4ನೆ ವಿಕೆಟ್‌ಗೆ 86 ರನ್ ಸೇರಿಸಿತು. ಬೈರ್‌ಸ್ಟೋವ್ ಅರ್ಧಶತಕ ವಂಚಿತರಾಗಿ ಪೆವಿಲಿಯನ್ ಸೇರಿದಾಗ 5ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 31 ರನ್ ಸೇರಿಸಿದ ಅಲಿ ಹಾಗೂ ಸ್ಟೋಕ್ಸ್ ತಂಡ ಮೊದಲ ದಿನದಾಟದಲ್ಲಿ ಗೌರವಾರ್ಹ ಮೊತ್ತ ಗಳಿಸಲು ನೆರವಾಗಿದ್ದಾರೆ.

ಭಾರತದ ಪರ ಸ್ಪಿನ್ನರ್ ರವೀಂದ್ರ ಜಡೇಜ(3-73) ಯಶಸ್ವಿ ಬೌಲರ್ ಎನಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News