ಅಲಿ ಶತಕ :ಇಂಗ್ಲೆಂಡ್ ಗೌರವಯುತ ಮೊತ್ತ
ಚೆನ್ನೈ, ಡಿ.16: ಮೊಯಿನ್ ಅಲಿ ಐದನೆ ಶತಕದ ನೆರವಿನಲ್ಲಿ ಇಂಗ್ಲೆಂಡ್ ತಂಡ ಇಲ್ಲಿ ಇಂದು ಆರಂಭಗೊಂಡ ಭಾರತ ವಿರುದ್ಧದ ಐದನೆ ಹಾಗೂ ಅಂತಿಮ ಕ್ರಿಕೆಟ್ ಟೆಸ್ಟ್‌ನಲ್ಲಿ ದಿನದಾಟದಂತ್ಯಕ್ಕೆ ಗೌರವಯುತ ಮೊತ್ತ ದಾಖಲಿಸಿದೆ.
ಇಲ್ಲಿನ ಎಂ.ಎ.ಚಿದಂಬರಂ ಸ್ಟೇಡಿಯಂನಲ್ಲಿ ಮೊದಲ ದಿನದಾಟದಂತ್ಯಕ್ಕೆ ಇಂಗ್ಲೆಂಡ್ 90 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 284 ರನ್ ಗಳಿಸಿದೆ.
ಮೊಯಿನ್ ಅಲಿ ಔಟಾಗದೆ 120 ರನ್(222ಎ, 12ಬೌ) ಮತ್ತು 5 ರನ್ ಗಳಿಸಿರುವ ಬೆನ್ ಸ್ಟೋಕ್ಸ್ ಔಟಾಗದೆ ಕ್ರೀಸ್‌ನಲ್ಲಿದ್ದಾರೆ.
ರವೀಂದ್ರ ಜಡೇಜ ದಾಳಿಗೆ ಸಿಲುಕಿ ಆರಂಭದಲ್ಲಿ ಇಂಗ್ಲೆಂಡ್ 21 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿತು. ಬಳಿಕ ಚೇತರಿಸಿಕೊಂಡಿತು. ಮೂರನೆ ವಿಕೆಟ್‌ಗೆ ಅಲಿ ಮತ್ತು ರೂಟ್ 146 ರನ್‌ಗಳ ಕೊಡುಗೆ ನೀಡಿದರು.
ಕಳೆದ ಟೆಸ್ಟ್‌ನಲ್ಲಿ ಶತಕ ದಾಖಲಿಸಿದ್ದ ಆರಂಭಿಕ ದಾಂಡಿಗ ಜೆನ್ನಿಂಗ್ಸ್ ಅವರು ಬೇಗನೆ ಔಟಾದರು. ಆರಂಭಿಕ ದಾಂಡಿಗ ಅಲಿಸ್ಟರ್ ಕುಕ್ ಮತ್ತು ಜೆನ್ನಿಂಗ್ಸ್ ಇನಿಂಗ್ಸ್ ಆರಂಭಿಸಿ ರನ್ ಗಳಿಸಲು ಪರದಾಡಿದರು. ಟಾಸ್ ಜಯಿಸಿದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ದುಕೊಂಡಿತ್ತು.
ಜೆನ್ನಿಂಗ್ಸ್ 17 ಎಸೆತಗಳನ್ನು ಎದುರಿಸಿ ಕೇವಲ 1 ರನ್ ಮಾಡಿದರು. 5.2ನೆ ಓವರ್‌ನಲ್ಲಿ ಅವರು ಇಶಾಂತ್ ಶರ್ಮ ಎಸೆತವನ್ನು ಎದುರಿಸುವ ಯತ್ನದಲ್ಲಿ ಪಾರ್ಥಿವ್ ಪಟೇಲ್‌ಗೆ ಕ್ಯಾಚ್ ನೀಡಿದರು. ನಾಯಕ ಅಲಿಸ್ಟರ್ ಕುಕ್‌ಗೆ ಜೋ ರೂಟ್ ಜೊತೆಯಾದರು. ಆದರೆ ಕುಕ್ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಅವರು 38 ಎಸೆತಗಳನ್ನು ಎದುರಿಸಿದ್ದರೂ ಒಂದು ಬೌಂಡರಿ ಸಹಾಯದಿಂದ 10 ರನ್ ಗಳಿಸಿ ಪೆವಿಲಿಯನ್ ಸೇರಿದರು. ರವೀಂದ್ರ ಜಡೇಜ ಅವರು ಪೆವಿಲಿಯನ್ ಹಾದಿ ತೋರಿಸಿದರು.
ಮೂರನೆ ವಿಕೆಟ್‌ಗೆ ರೂಟ್ ಮತ್ತು ಮೊಯಿನ್ ಅಲಿ 146 ರನ್‌ಗಳ ಜೊತೆಯಾಟ ನೀಡಿದರು. ರೂಟ್ ಚೆನ್ನಾಗಿ ಬ್ಯಾಟಿಂಗ್ ನಡೆಸಿದರು.ಆದರೆ ಅವರಿಗೆ ಶತಕ ವಂಚಿತಗೊಂಡರು. ರೂಟ್ 88 ರನ್ ಗಳಿಸಿ ಔಟಾದರು. ರೂಟ್ ಜಡೇಜ ಎಸೆತದಲ್ಲಿ ಪಟೇಲ್‌ಗೆ ಕ್ಯಾಚ್ ನೀಡಿದರು. ರೂಟ್ 144 ಎಸೆತಗಳಲ್ಲಿ 10 ಬೌಂಡರಿಗಳ ಸಹಾಯದಿಂದ 88 ರನ್ ಗಳಿಸಿದರು. ಆದರೆ ರೂಟ್ 11ನೆ ಅರ್ಧಶತಕ ಪೂರ್ಣಗೊಳಿಸಿದರು.
ನಾಲ್ಕನೆ ವಿಕೆಟ್‌ಗೆ ಮೊಯಿನ್ ಅಲಿ ಮತ್ತು ಬೈರ್‌ಸ್ಟೋವ್ 86 ರನ್‌ಗಳ ಕಾಣಿಕೆ ನೀಡಿದರು. ಬೈರ್‌ಸ್ಟೋವ್ 1 ರನ್‌ನಿಂದ ಅರ್ಧಶತಕ ವಂಚಿತಗೊಂಡರು. ಬೈರ್‌ಸ್ಟೋವ್ 90 ಎಸೆತಗಳನ್ನು ಎದುರಿಸಿದರು. 3 ಸಿಕ್ಸರ್ ಸಿಡಿಸಿದರು.
ಮೊಯಿನ್ ಅಲಿ ತಂಡವನ್ನು ಆಧರಿಸಿ 203 ಎಸೆತಗಳಲ್ಲಿ 9 ಬೌಂಡರಿಗಳ ಸಹಾಯದಿಂದ ಶತಕ ಪೂರ್ಣಗೊಳಿಸಿದರು.120 ರನ್ (222ಎ, 12ಬೌ) ಗಳಿಸಿರುವ ಅಲಿ ಬ್ಯಾಟಿಂಗ್‌ನ್ನು ಎರಡನೆ ದಿನಕ್ಕೆ ಕಾಯ್ದಿರಿಸಿದ್ದಾರೆ.
ಭಾರತದ ಪರ ರವೀಂದ್ರ ಜಡೇಜ 73ಕ್ಕೆ 3 ವಿಕೆಟ್ ಮತ್ತು ಇಶಾಂತ್ ಶರ್ಮ 25ಕ್ಕೆ 1 ವಿಕೆಟ್ ಪಡೆದರು.
ಸ್ಕೋರ್ ಪಟ್ಟಿ
ಇಂಗ್ಲೆಂಡ್ 90 ಓವರ್‌ಗಳಲ್ಲಿ 4 ವಿಕೆಟ್‌ಗೆ 284
ಎ.ಎನ್.ಕುಕ್ ಸಿ ಕೊಹ್ಲಿ ಬಿ ಜಡೇಜ10
ಜೆನ್ನಿಂಗ್ಸ್ ಸಿ ಪಟೇಲ್ ಬಿ ಶರ್ಮ01
ಜೋ ರೂಟ್ ಸಿ ಪಟೇಲ್ ಬಿ ಜಡೇಜ88
ಎಂಎಂ ಅಲಿ ಔಟಾಗದೆ120
ಬೈರ್‌ಸ್ಟೋವ್ ಸಿ ರಾಹುಲ್ ಬಿ ಜಡೇಜ49
ಬೆನ್‌ಸ್ಟೋಕ್ಸ್ ಔಟಾಗದೆ 05
ಇತರೆ11
ವಿಕೆಟ್ ಪತನ: 1-7, 2-21-3-167, 4-253
ಬೌಲಿಂಗ್ ವಿವರ
ಉಮೇಶ್ ಯಾದವ್ 12-1-44-0
ಇಶಾಂತ್ ಶರ್ಮ12-5-25-1
ರವೀಂದ್ರ ಜಡೇಜ28-3-73-3
ಆರ್.ಅಶ್ವಿನ್24-1-76-0
ಅಮಿತ್ ಮಿಶ್ರಾ 13-1-52-0
ಕರುಣ್ ನಾಯರ್ 01-0-04-0
,,,,,,,,,,,,,