×
Ad

ಐದನೆ ಟೆಸ್ಟ್: ಕೆಎಲ್ ರಾಹುಲ್ ಆಕರ್ಷಕ ಶತಕ

Update: 2016-12-18 15:32 IST

ಚೆನ್ನೈ, ಡಿ.18: ಕನ್ನಡಿಗ ಹಾಗೂ ಆರಂಭಿಕ ದಾಂಡಿಗ ಕೆಎಲ್ ರಾಹುಲ್ ಇಂಗ್ಲೆಂಡ್ ವಿರುದ್ಧ ಇಲ್ಲಿ ನಡೆಯುತ್ತಿರುವ ಐದನೆ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಕರ್ಷಕ ಶತಕ ಬಾರಿಸಿ ತಂಡವನ್ನು ಆಧರಿಸಿದ್ದಾರೆ.

30 ರನ್‌ನಿಂದ ಮೂರನೆ ದಿನದಾಟವನ್ನು ಆರಂಭಿಸಿದ ರಾಹುಲ್ ನಾಲ್ಕನೆ ಶತಕವನ್ನು ಪೂರೈಸಿದರು. ಪಾರ್ಥಿವ ಪಟೇಲ್‌ರೊಂದಿಗೆ ಮೊದಲ ವಿಕೆಟ್‌ಗೆ 152 ರನ್ ಗಳಿಸಿ ಭದ್ರ ಬುನಾದಿ ಹಾಕಿಕೊಟ್ಟ ರಾಹುಲ್ 171 ಎಸೆತಗಳಲ್ಲಿ 8ಬೌಂಡರಿ ಹಾಗೂ 2 ಸಿಕ್ಸರ್‌ನೆರವಿನಿಂದ ಶತಕ ಬಾರಿಸಿದರು.

 ಟೀ ವಿರಾಮದ ಬಳಿಕ ಇನ್ನೋರ್ವ ಕನ್ನಡಿಗ ಕರುಣ್ ನಾಯರ್‌ರೊಂದಿಗೆ (ಅಜೇಯ 41) 4ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 98 ರನ್ ಸೇರಿಸಿರುವ ರಾಹುಲ್(ಅಜೇಯ 155, 267 ಎಸೆತ, 11 ಬೌಂಡರಿ, 2 ಸಿಕ್ಸರ್) ತಂಡವನ್ನು ಉತ್ತಮ ಮೊತ್ತದತ್ತ ಕೊಂಡೊಯ್ದಿದ್ದಾರೆ.

ನಾಯಕ ಕೊಹ್ಲಿ 15 ರನ್‌ಗೆ ಔಟಾದರು. ಪಾರ್ಥಿವ್ ಪಟೇಲ್ 77 ರನ್ ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News