×
Ad

ಐದನೆ ಟೆಸ್ಟ್: ರಾಹುಲ್ 199 ರನ್ ಗಳಿಸಿ ಔಟ್

Update: 2016-12-18 16:50 IST

 ಚೆನ್ನೈ, ಡಿ.18: ಕನ್ನಡಿಗ ಹಾಗೂ ಆರಂಭಿಕ ದಾಂಡಿಗ ಕೆಎಲ್ ರಾಹುಲ್ ಇಂಗ್ಲೆಂಡ್ ವಿರುದ್ಧ ಇಲ್ಲಿ ನಡೆಯುತ್ತಿರುವ ಐದನೆ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಕೇವಲ ಒಂದು ರನ್‌ನಿಂದ ದ್ವಿಶತಕದಿಂದ ವಂಚಿತರಾದರು.

 3ನೆ ದಿನದಾಟವಾದ ರವಿವಾರ 30 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ರಾಹುಲ್ 199 ರನ್ ಗಳಿಸಿ ಚೊಚ್ಚಲ ದ್ವಿಶತಕ ದಾಖಲಿಸುವ ವಿಶ್ವಾಸದಲ್ಲಿದ್ದರು. ಆದರೆ, ಇಂಗ್ಲೆಂಡ್ ಸ್ಪಿನ್ನರ್ ರಶೀದ್ ಅವರು ರಾಹುಲ್‌ಗೆ ದ್ವಿಶತಕ ನಿರಾಕರಿಸಿದರು.

311 ಎಸೆತಗಳನ್ನು ಎದುರಿಸಿದ್ದ ರಾಹುಲ್ 16 ಬೌಂಡರಿ ಹಾಗೂ 3 ಸಿಕ್ಸರ್‌ಗಳನ್ನು ಸಿಡಿಸಿದರು. ಇನ್ನೋರ್ವ ಕನ್ನಡಿಗ ಕರುಣ್ ನಾಯರ್‌(70)ರೊಂದಿಗೆ 4ನೆ ವಿಕೆಟ್‌ಗೆ 161 ರನ್ ಜೊತೆಯಾಟ ನಡೆಸಿದರು. ಪಾರ್ಥಿವ್ ಪಟೇಲ್‌ರೊಂದಿಗೆ ಮೊದಲ ವಿಕೆಟ್‌ಗೆ 152 ರನ್ ಗಳಿಸಿ ಭದ್ರ ಬುನಾದಿ ಹಾಕಿಕೊಟ್ಟ ರಾಹುಲ್ 171 ಎಸೆತಗಳಲ್ಲಿ 8 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ ತವರು ನೆಲದಲ್ಲಿ ಚೊಚ್ಚಲ ಶತಕ ಬಾರಿಸಿದರು. ರಾಹುಲ್ ಟೆಸ್ಟ್ ಕ್ರಿಕೆಟ್‌ನಲ್ಲಿ ಬಾರಿಸಿದ ನಾಲ್ಕನೆ ಶತಕ ಇದಾಗಿದೆ.

ನಾಯಕ ಕೊಹ್ಲಿ 15 ರನ್‌ಗೆ ಔಟಾದರು. ಪಾರ್ಥಿವ್ ಪಟೇಲ್ 77 ರನ್ ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News