×
Ad

ಭಾರತದ ಮಡಿಲಿಗೆ ಜೂನಿಯರ್ ಹಾಕಿ ವಿಶ್ವಕಪ್

Update: 2016-12-18 19:30 IST

ಲಕ್ನೋ, ಡಿ.18: ಬೆಲ್ಜಿಯಂ ತಂಡವನ್ನು 2-1 ಗೋಲುಗಳ ಅಂತರದಿಂದ ಮಣಿಸಿದ ಭಾರತ ಜೂನಿಯರ್ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಭಾರತ ತವರು ನೆಲದಲ್ಲಿ ಜೂನಿಯರ್ ಹಾಕಿ ವಿಶ್ವಕಪ್ ಟೂರ್ನಿಯನ್ನು ಜಯಿಸಿದ ಮೊದಲ ತಂಡವೆಂಬ ಕೀರ್ತಿಗೂ ಭಾಜನವಾಗಿದೆ. 15 ವರ್ಷಗಳ ಬಳಿಕ ವಿಶ್ವಕಪ್ ಜಯಿಸಿದ ಭಾರತ ಐತಿಹಾಸಿಕ ಸಾಧನೆ ಮಾಡಿತು. 2001ರಲ್ಲಿ ಆಸ್ಟ್ರೇಲಿಯದಲ್ಲಿ ಚೊಚ್ಚಲ ಪ್ರಶಸ್ತಿ ಜಯಿಸಿತ್ತು.

ರವಿವಾರ ಇಲ್ಲಿ ನಡೆದ ಫೈನಲ್ ಪಂದ್ಯದ 8ನೆ ನಿಮಿಷದಲ್ಲಿ ಗೋಲು ಬಾರಿಸಿದ ಗುರ್ಜಂತ್ ಸಿಂಗ್ ಭಾರತಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು. ಸಿಮ್ರಾನ್ ಸಿಂಗ್ 22ನೆ ನಿಮಿಷದಲ್ಲಿ ಭಾರತದ ಮುನ್ನಡೆಯನ್ನು 2-0ಗೆ ವಿಸ್ತರಿಸಿದರು. ಸಿಮ್ರಾನ್ ಪ್ರಸ್ತುತ ಟೂರ್ನಿಯಲ್ಲಿ 3ನೆ ಗೋಲು ಬಾರಿಸಿದರು.

53ನೆ ನಿಮಿಷದಲ್ಲಿ ಅತ್ಯುತ್ತಮ ಗೋಲ್‌ಕೀಪಿಂಗ್ ನಡೆಸಿದ ವಿಕಾಸ್ ದಾಹಿಯಾ ಬೆಲ್ಜಿಯಂಗೆ ಗೋಲು ನಿರಾಕರಿಸಿದರು.

ಭಾರತ ಮೊದಲಾರ್ಧದಲ್ಲಿ 2-0 ಮುನ್ನಡೆ ಕಾಯ್ದುಕೊಂಡಿತು. ಕೊನೆಯ ನಿಮಿಷದಲ್ಲಿ ಗೋಲು ಬಾರಿಸಿದ ಬೆಲ್ಜಿಯಂ ಸೋಲಿನ ಅಂತರ ತಗ್ಗಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News