ಐದನೆ ಟೆಸ್ಟ್: ಕರುಣ್ ನಾಯರ್ ತ್ರಿಶತಕ
ಚೆನ್ನೈ ,ಡಿ.19: ಇಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಐದನೆ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಭಾರತದ ಕರುಣ್ ನಾಯರ್ ಚೊಚ್ಚಲ ತ್ರಿಶತಕ ದಾಖಲಿಸಿದರು.
ಕನ್ನಡಿಗ ಕರುಣ್ ನಾಯರ್ 381 ಎಸೆತಗಳಲ್ಲಿ 32 ಬೌಂಡರಿ ಮತ್ತು 4 ಸಿಕ್ಸರ್ ನೆರವಿನಿಂದ ತ್ರಿಶತಕ ಪೂರ್ಣಗೊಳಿಸಿದರು. ನಾಯರ್ ಚೊಚ್ಚಲ ಶತಕ ದಾಖಲಿಸಿ ಬಳಿಕ ದ್ವಿಶತಕ, ತ್ರಿಶತಕ ದಾಖಲಿಸಿದ ಮೊದಲ ಭಾರತೀಯ ಮತ್ತು ವಿಶ್ವದ ಮೂರನೆ ಬ್ಯಾಟ್ಸ್ ಮನ್ ಎನಿಸಿಕೊಂಡಿದ್ದಾರೆ.
ಕರುಣ್ ನಾಯರ್ 190.4ನೆ ಓವರ್ ನಲ್ಲಿ ಆದಿಲ್ ರಶೀದ್ ಎಸೆತವನ್ನು ಬೌಂಡರಿಗಟ್ಟುವ ಮೂಲಕ ತ್ರಿಶತಕದ ಸಾಧನೆ ಮಾಡಿದರು. ವೀರೇಂದ್ರ ಸೆಹ್ವಾಗ್ ಬಳಿಕ ಈ ಸಾಧನೆ ಮಾಡಿದ ಭಾರತದ ಎರಡನೆ ಬ್ಯಾಟ್ಸ್‌ಮನ್ ಕರುಣ್ ನಾಯರ್. ಭಾರತದ ನಾಯಕ ವಿರಾಟ್ ಕೊಹ್ಲಿ ಅವರು ನಾಯರ್ ತ್ರಿಶತಕ ದಾಖಲಿಸಿದ ಬೆನ್ನಲ್ಲೆ ಇನಿಂಗ್ಸ್ ಡಿಕ್ಲೇರ್ ಮಾಡುವ ನಿರ್ಧಾರ ಕೈಗೊಂಡರು. ಭಾರತ ಮೊದಲ ಇನಿಂಗ್ಸ್‌ನಲ್ಲಿ 190.4 ಓವರ್‌ಗಳಲ್ಲಿ7 ವಿಕೆಟ್ ನಷ್ಟದಲ್ಲಿ 759 ರನ್ ಗಳಿಸಿದ್ದು, 282 ರನ್ ಗಳ ಮುನ್ನಡೆ ಸಾಧಿಸಿದೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.