ಟರ್ಕಿ: ಅಮೆರಿಕ ರಾಯಭಾರ ಕಚೇರಿಯ ಹೊರಗೆ ಗುಂಡು ಹಾರಾಟ : ಕಚೇರಿ ಬಂದ್
ಇಸ್ತಾಂಬುಲ್, ಡಿ. 20: ಅಂಕಾರದಲ್ಲಿರುವ ಅಮೆರಿಕನ್ ರಾಯಭಾರ ಕಚೇರಿಯ ಹೊರಗಡೆ ಸೋಮವಾರ ರಾತ್ರಿ ಗುಂಡು ಹಾರಾಟದ ಘಟನೆ ನಡೆದ ಹಿನ್ನೆಲೆಯಲ್ಲಿ ಅಮೆರಿಕ ಮಂಗಳವಾರ ತನ್ನ ಟರ್ಕಿ ರಾಯಭಾರ ಕಚೇರಿಯನ್ನು ಮುಚ್ಚಿದೆ.
ಟರ್ಕಿ ರಾಜಧಾನಿಯಲ್ಲಿ ರಶ್ಯದ ರಾಯಭಾರಿಯ ಹತ್ಯೆ ನಡೆದ ಬೆನ್ನಿಗೇ ಈ ಗುಂಡು ಹಾರಾಟ ನಡೆದಿರುವುದು ಆತಂಕ ಹುಟ್ಟಿಸಿದೆ.
‘‘ಅಂಕಾರದಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಪ್ರಧಾನ ದ್ವಾರವನ್ನು ಸಮೀಪಿಸಿದ ವ್ಯಕ್ತಿಯೊಬ್ಬ ಬಂದೂಕಿನಿಂದ ಗುಂಡು ಹಾರಿಸಿದನು’’ ಎಂದು ರಾಯಭಾರ ಕಚೇರಿಯು ಹೇಳಿಕೆಯೊಂದರಲ್ಲಿ ತಿಳಿಸಿದೆ.
ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ ಹಾಗೂ ಗುಂಡು ಹಾರಿಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಅದು ಹೇಳಿದೆ.
ಈ ಹಿನ್ನೆಲೆಯಲ್ಲಿ, ರಾಯಭಾರ ಕಚೇರಿ ಹಾಗೂ ಇಸ್ತಾಂಬುಲ್ ಮತ್ತು ಅಡಾನಗಳಲ್ಲಿರುವ ಕಾನ್ಸುಲೇಟ್ ಕಚೇರಿಗಳನ್ನು ಮುಚ್ಚಲಾಗಿದೆ ಎಂದು ಹೇಳಿಕೆ ತಿಳಿಸಿದೆ.
ಪೊಲೀಸ್ ಅಧಿಕಾರಿಯೊಬ್ಬ ಟರ್ಕಿಗೆ ರಶ್ಯದ ರಾಯಭಾರಿಯನ್ನು ಗುಂಡು ಹಾರಿಸಿ ಕೊಂದ ಗಂಟೆಗಳ ಬಳಿಕ, ಮಂಗಳವಾರ ಮುಂಜಾನೆ 3:50ಕ್ಕೆ ಈ ಗುಂಡು ಹಾರಾಟ ಘಟನೆ ನಡೆದಿದೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.