×
Ad

ಮುಸ್ಲಿಮ್ ಮಹಿಳೆಯ ಮುಖಕ್ಕೆ ಬಿಸಿ ಕಾಫಿ ಎಸೆದ ದುಷ್ಕರ್ಮಿ

Update: 2016-12-20 21:27 IST

ನ್ಯೂಯಾರ್ಕ್, ಡಿ. 20: ನ್ಯೂಯಾರ್ಕ್‌ನ ಅಂಗಡಿಯೊಂದರಲ್ಲಿ ವ್ಯಕ್ತಿಯೊಬ್ಬ ಮುಸ್ಲಿಮ್ ಮಹಿಳೆಯೊಬ್ಬರನ್ನು ಭಯೋತ್ಪಾದಕಿ ಎಂಬುದಾಗಿ ಕರೆದು ಆಕೆಯ ಮುಖಕ್ಕೆ ಬಿಸಿ ಕಾಫಿ ಎಸೆದು ಹಲ್ಲೆ ನಡೆಸಿದ ಘಟನೆ ಸೋಮವಾರ ನಡೆದಿದೆ.

34 ವರ್ಷದ ದುಷ್ಕರ್ಮಿ ನತಾನ್ ಗ್ರೇ ಮ್ಯಾನ್‌ಹಟನ್‌ನಲ್ಲಿರುವ ಅಂಗಡಿಗೆ ಬಂದು ಕಾಫಿ ಕೇಳಿ 21 ವರ್ಷದ ಸಂತ್ರಸ್ತ ಮಹಿಳೆಯ ಪಕ್ಕದಲ್ಲಿ ಕೂತನು. ಮಹಿಳೆಯು ಇತರ ಮುಸ್ಲಿಮ್ ಮಹಿಳೆಯರ ಗುಂಪಿನಲ್ಲಿ ಇದ್ದರು.

ಮಹಿಳೆಯರನ್ನು ಉದ್ದೇಶಿಸಿ ‘ಭಯೋತ್ಪಾದಕರು’ ಎಂಬುದಾಗಿ ಗ್ರೇ ಕರೆದನು. ಅದನ್ನು ಮಹಿಳೆಯರು ನಿರ್ಲಕ್ಷಿಸಿದರು.

‘‘ಓರ್ವ ಮಹಿಳೆ ಆತನನ್ನು ‘ಸ್ಟುಪಿಡ್’ ಎಂಬುದಾಗಿ ಕರೆದರು. ಆಗ ಆತ ಬಿಸಿ ಕಾಫಿಯನ್ನು ಆಕೆಯ ಮುಖಕ್ಕೆ ಎಸೆದನು. ಬಳಿಕ ಆತ ತನ್ನ ಬ್ಯಾಗನ್ನು ಆಕೆಯತ್ತ ಎಸೆದನು. ಅದು ಮಹಿಳೆಯ ಮುಖಕ್ಕೆ ಬಡಿಯಿತು’’ ಎಂಬುದಾಗಿ ಅಂಗಡಿಯ ಉದ್ಯೋಗಿಯೊಬ್ಬ ಹೇಳಿದರೆಂದು ‘ನ್ಯೂಯಾರ್ಕ್ ಡೇಲಿ ನ್ಯೂಸ್’ ವರದಿ ಮಾಡಿದೆ.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News