×
Ad

ಜಪಾನ್: ವೇಗದ ಗಾಳಿಯಿಂದ ಹರಡುತ್ತಿರುವ ಬೆಂಕಿ : 140 ಕಟ್ಟಡಗಳು ಭಸ್ಮ

Update: 2016-12-22 20:34 IST

ಟೋಕಿಯೊ, ಡಿ. 22: ಜಪಾನ್ ಕರಾವಳಿಯ ಸಣ್ಣ ನಗರ ಇಟೋಯಿಗವದಲ್ಲಿ ವೇಗದ ಗಾಳಿಯಿಂದಾಗಿ ಹಬ್ಬಿದ ಬೆಂಕಿಯು ಕನಿಷ್ಠ 140 ಕಟ್ಟಡಗಳನ್ನು ಆವರಿಸಿದೆ.

ಬೆಂಕಿಯು ಗುರುವಾರ ಬೆಳಗ್ಗೆ ನಗರದ ರೆಸ್ಟೋರೆಂಟ್ ಒಂದರಲ್ಲಿ ಆರಂಭಗೊಂಡಿತು ಎಂದು ಅಗ್ನಿಶಾಮಕ ಇಲಾಖೆ ಹೇಳಿದೆ. ಗುರುವಾರ ಅಪರಾಹ್ನದ ವೇಳೆಗೆ ಅದು 140 ಮನೆಗಳು ಮತ್ತು ಇತರ ಕಟ್ಟಡಗಳಿಗೆ ಹಬ್ಬಿತು ಹಾಗೂ ಬೆಂಕಿ ಈಗಲೂ ಹರಡುತ್ತಿದೆ.

ಇಬ್ಬರು ವ್ಯಕ್ತಿಗಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ಜಪಾನ್ ಮಾಧ್ಯಮ ತಿಳಿಸಿದೆ.

273 ಮನೆಗಳನ್ನು ತೆರವುಗೊಳಿಸಲು ಅಧಿಕಾರಿಗರಳು ಆದೇಶ ಹೊರಡಿಸಿದ್ದಾರೆ.

ಇಟೋಯಿಗವ ನಗರವು ನೀಗಟ ರಾಜ್ಯದಲ್ಲಿದ್ದು, ಟೋಕಿಯೊದಿಂದ ಸುಮಾರು 260 ಕಿ.ಮೀ. ದೂರದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News