ಕ್ಯಾನ್ಸರ್ ಪೀಡಿತ ಮಕ್ಕಳೊಂದಿಗೆ ಸಮಯ ಕಳೆದ ಯುವರಾಜ್
Update: 2016-12-23 23:15 IST
ಮುಂಬೈ, ಡಿ.23: ಭಾರತೀಯ ಕ್ರಿಕೆಟಿಗ ಯುವರಾಜ್ ಸಿಂಗ್ ಮುಂಬೈನ ಸೈಂಟ್ ಜೂಡ್ ಇಂಡಿಯಾ ಚೈಲ್ಡ್ ಕೇರ್ ಸೆಂಟರ್‌ಗೆ ಶುಕ್ರವಾರ ಭೇಟಿ ನೀಡಿದರು. ಈ ಸಂದರ್ಭ ಕ್ಯಾನ್ಸರ್ ಪೀಡಿತ ಮಕ್ಕಳೊಂದಿಗೆ ಕೆಲವು ಸಮಯ ಕಳೆದರು.
ಕ್ಯಾನ್ಸರ್ ಪೀಡಿತ 30 ಮಕ್ಕಳೊಂದಿಗೆ ಬೆರೆತು ನಗೆ ಚಟಾಕಿ ಹಾರಿಸಿದ ಯುವಿ ಕ್ರಿಸ್‌ಮಸ್ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ವೈಎಂಸಿ ಲೇಬಲ್‌ವಿರುವ ಉಡುಗೊರೆಗಳನ್ನು ಮಕ್ಕಳಿಗೆ ನೀಡಿದರು.
‘‘ಕ್ಯಾನ್ಸರ್‌ಪೀಡಿತರಿಗೆ ಬೆಂಬಲ ನೀಡುವುದು ನನ್ನ ಜೀವನದ ಮುಖ್ಯ ಗುರಿ. ಸೈಂಟ್ ಜೂಡ್ ಚೈಲ್ಡ್‌ಕೇರ್‌ನ ಮಕ್ಕಳು ಇಂದು ನನ್ನ ಹೃದಯ ಗೆದ್ದಿದ್ದಾರೆ. ಅವರೊಂದಿಗೆ ಸಮಯ ಕಳೆಯುವ ಅವಕಾಶ ನನಗೆ ಲಭಿಸಿದ್ದು, ಈ ಮಕ್ಕಳು ಬೇಗನೆ ಚೇತರಿಸಿಕೊಳ್ಳಲಿ’’ ಎಂದು ಹಾರೈಸುವೆ ಎಂದು ಯುವಿ ತಿಳಿಸಿದರು. 2011ರಲ್ಲಿ ಭಾರತದಲ್ಲಿ ನಡೆದ ವಿಶ್ವಕಪ್‌ನಲ್ಲಿ ಭಾರತ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಯುವರಾಜ್ ಅದೇ ವರ್ಷ ಕ್ಯಾನ್ಸರ್‌ಗೆ ತುತ್ತಾಗಿ ಚಿಕಿತ್ಸೆ ಪಡೆದಿದ್ದರು