×
Ad

ಪತನಗೊಂಡ ರಶ್ಯ ಸೇನಾ ವಿಮಾನದ ಬ್ಲಾಕ್‌ಬಾಕ್ಸ್ ಪತ್ತೆ

Update: 2016-12-27 21:48 IST

ಸೋಚಿ(ರಶ್ಯ), ಡಿ.27: ಕಪ್ಪು ಸಮುದ್ರದಲ್ಲಿ ರವಿವಾರ ಪತನಗೊಂಡ 90 ಮಂದಿ ಯೋಧರಿದ್ದ ರಶ್ಯನ್ ಸೇನಾವಿಮಾನದ ಬ್ಲಾಕ್‌ಬಾಕ್ಸ್ ಪತ್ತೆಯಾಗಿರುವುದಾಗಿ ರಶ್ಯದ ಅಧಿಕಾರಿಗಳು ತಿಳಿಸಿದ್ದಾರೆ.

ಸೋಚಿ ಸಮೀಪದ ಸಾಗರಪ್ರದೇಶದಲ್ಲಿ ಪತನಗೊಂಡ ಟಿಯು-154 ವಿಮಾನದ ಪತ್ತೆಗಾಗಿ ನಡೆಯುತ್ತಿರುವ ಶೋಧ ಕಾರ್ಯಾಚರಣೆಯ ವೇಳೆ ಬ್ಲಾಕ್‌ಬಾಕ್ಸ್ ಪತ್ತೆಯಾಗಿದೆಯೆಂದು ಅವರು ಹೇಳಿದ್ದಾರೆ. ಸಮುದ್ರದಲ್ಲಿ 17 ಮೀಟರ್ ಆಳದಲ್ಲಿ ಪತ್ತೆಯಾದ ಕಪ್ಪುಪೆಟ್ಟಿಗೆಯನ್ನು, ಮಾಸ್ಕೊಗೆ ಕಳುಹಿಸಲಾಗಿದ್ದು ಅಲ್ಲಿ ಅದನ್ನು ತಜ್ಞರು ಪರಿಶೀಲಿಸಲಿದ್ದಾರೆಂದು ರಕ್ಷಣಾ ಸಚಿವಾಲಯವು ಹೇಳಿಕೆಯೊಂದರಲ್ಲಿ ತಿಳಿಸಿದೆ.

 ರವಿವಾರ ಸಿರಿಯದಲ್ಲಿರುವ ರಶ್ಯದ ವಾಯುನೆಲೆಗೆ ತೆರಳುತ್ತಿದ್ದ ಈ ವಿಮಾನವು ಸೋಚಿ ನಗರದ ಸಮೀಪ ಹಾರಾಟ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ಪತನಗೊಂಡಿತ್ತು. ವಿಮಾನ ಪತನದ ಕಾರಣವನ್ನು ತನಿಖಾಧಿಕಾರಿಗಳು ಇನ್ನಷ್ಟೇ ದೃಢಪಡಿ ಸಬೇಕಿದೆ. ಆದರೆ ಇದು ಭಯೋತ್ಪಾದಕ ಕೃತ್ಯವೆಂದು ಪರಿಗಣಿಸಲಾಗಿಲ್ಲವೆಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News