×
Ad

ವಿಶ್ವಸಂಸ್ಥೆ ಕಾಲಹರಣ ಮಾಡುವವರ ಕೂಟ : ಡೊನಾಲ್ಡ್ ಟ್ರಂಪ್ ವ್ಯಂಗ್ಯ

Update: 2016-12-27 21:57 IST

ವೆಸ್ಟ್‌ಪಾಮ್ ಬೀಚ್(ಅಮೆರಿಕ), ಡಿ.27: ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್‌ಟ್ರಂಪ್ ಅವರು ವಿಶ್ವಸಂಸ್ಥೆಯ ಪರಿಣಾಮಕಾರಿತ್ವವನ್ನು ಪ್ರಶ್ನಿಸಿದ್ದು, ‘‘ಅದೊಂದು ಕಾಲಹರಣ ಮಾಡುವವರ ಕೂಟ’ಎಂದವರು ಟೀಕಿಸಿದ್ದಾರೆ.

ಶನಿವಾರ ಟ್ವಿಟರ್‌ನಲ್ಲಿ ಪ್ರಕಟಿಸಿದ ಸಂದೇಶವೊಂದರಲ್ಲಿ ಈ ಟೀಕೆಯನ್ನು ಮಾಡಿರುವ ಅವರು, ವಿಶ್ವಸಂಸ್ಥೆಯು ಅಪಾರ ಸಾಮರ್ಥ್ಯವನ್ನು ಹೊಂದಿದೆ. ಆದರೆ ಅದು ಹರಟೆ ಹೊಡೆಯಲು ಹಾಗೂ ಸಮಯ ಕಳೆಯಲು ಒಟ್ಟು ಸೇರುವವರ ಕೂಟವಾಗಿದೆ’’ ಎಂದವರು ವ್ಯಂಗ್ಯವಾಡಿದ್ದಾರೆ. ಪಶ್ಚಿಮದಂಡೆ ಹಾಗೂ ಪೂರ್ವ ಜೆರುಸಲೇಂನಲ್ಲಿ ಇಸ್ರೇಲಿ ವಸಾಹತುಗಳ ನಿರ್ಮಾಣವನ್ನು ಖಂಡಿಸಿ, ಭದ್ರತಾ ಮಂಡಳಿಯು ಶುಕ್ರವಾರ ಬಹುಮತದಿಂದ ನಿರ್ಣಯವೊಂದನ್ನು ಅಂಗೀಕರಿಸಿರುವ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

ಭದ್ರತಾಮಂಡಳಿಯ ಸಭೆಗೆ ಅಮೆರಿಕ ಗೈರುಹಾಜರಾಗುವ ಮೂಲಕ ನಿರ್ಣಯ ಮಂಡನೆಯ ವಿರುದ್ಧ ವಿಟೋ ಪ್ರಯೋಗಿಸುವುದರಿಂದ ತಪ್ಪಿಸಿಕೊಂಡಿರುವುದು ಇಸ್ರೇಲ್‌ನ ಅಸಮಾಧಾನಕ್ಕೆ ಕಾರಣವಾಗಿದೆ.

ಇಸ್ರೇಲ್ ವಿರುದ್ಧ ಭದ್ರತಾ ಮಂಡಳಿಯಲ್ಲಿ ನಿರ್ಣಯ ಅಂಗೀಕಾರವಾದ ಬಳಿಕ ಟ್ರಂಪ್ ಟ್ವಟರ್‌ನಲ್ಲಿ ,ಅಮೆರಿಕ ಅಧ್ಯಕ್ಷನಾಗಿ ಅಧಿಕಾರಕ್ಕೇರಲಿರುವ ದಿನವಾದ ಜನವರಿ 20ರ ಬಳಿಕ ಪರಿಸ್ಥಿತಿ ಬೇರೆಯೇ ಅಗಲಿದೆಯೆಂದು ಹೇಳುವ ಮೂಲಕ ತನ್ನ ಅಧಿಕಾರವಧಿಯಲ್ಲಿ ಅಮೆರಿಕವು ಇಸ್ರೇಲ್ ಪರ ಧೋರಣೆಯನ್ನು ಮುಂದುವರಿಸುವ ಸುಳಿವು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News