ಶ್ರೀಲಂಕಾ ಮಾಜಿ ಪ್ರಧಾನಿ ಇನ್ನಿಲ್ಲ
Update: 2016-12-27 22:16 IST
ಕೊಲಂಬೊ,ಡಿ.27: ಶ್ರೀಲಂಕಾದ ಮಾಜಿ ಪ್ರಧಾನಿ ರತ್ನಸಿರಿ ವಿಕ್ರಮನಾಯಕೆ ಮಂಗಳವಾರ ನಿಧನರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು. ಶ್ರೀಲಂಕಾದ ಪ್ರಧಾನಿಯಾಗಿ ವಿಕ್ರಮನಾಯಕೆ ಅವರು 2000ದಿಂದ 2001ರವರೆಗೆ ಹಾಗೂ 2005ರಿಂದ 2010ರವರೆಗೆ ಕಾರ್ಯನಿರ್ವಹಿಸಿದ್ದರೆಂದು ಕ್ಸಿನುವಾ ಸುದ್ದಿಸಂಸ್ಥೆ ವರದಿ ಮಾಡಿದೆ.