×
Ad

ಭಾರತ-ಇಂಗ್ಲೆಂಡ್ ಮೊದಲ ಏಕದಿನ: ಟಿಕೆಟ್ ಸೋಲ್ಡ್‌ಔಟ್

Update: 2016-12-28 23:36 IST

ಪುಣೆ, ಡಿ.28: ಆತಿಥೇಯ ಭಾರತ ಹಾಗೂ ಇಂಗ್ಲೆಂಡ್‌ನ ನಡುವೆ ಜ.15 ರಂದು ಎಂಸಿಎ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ನಿಗದಿಯಾಗಿರುವ ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯದ ಟಿಕೆಟ್‌ಗಳೆಲ್ಲವೂ ಮಾರಾಟವಾಗಿವೆ ಎಂದು ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಘೋಷಿಸಿದೆ.

ಹಗಲು-ರಾತ್ರಿ ನಡೆಯಲಿರುವ ಏಕದಿನ ಪಂದ್ಯದ ಟಿಕೆಟ್ ಮಾರಾಟ ಡಿ.15 ರಿಂದ ಆರಂಭವಾಗಿದ್ದು, 12 ದಿನಗಳಲ್ಲಿ ಎಲ್ಲವೂ ಮಾರಾಟವಾಗಿದೆ ಎಂದು ಎಂಸಿಎ ತಿಳಿಸಿದೆ.

 ಮೂರು ವರ್ಷಗಳ ವಿರಾಮದ ಬಳಿಕ 37,406 ಆಸನ ಸಾಮರ್ಥ್ಯದ ಎಂಸಿಎ ಸ್ಟೇಡಿಯಂನಲ್ಲಿ ಏಕದಿನ ಪಂದ್ಯ ನಿಗದಿಯಾಗಿದೆ. ಈ ಹಿನ್ನೆಲೆಯಲ್ಲಿ ಟಿಕೆಟ್‌ಗಳೆಲ್ಲವೂ ಮಾರಾಟವಾಗಿವೆ ಎಂದು ಎಂಸಿಎ ಹೇಳಿದೆ.

2013ರ ಅಕ್ಟೋಬರ್ 13 ರಂದು ಭಾರತ ಹಾಗೂ ಆಸ್ಟ್ರೇಲಿಯದ ನಡುವೆ ಎಂಸಿಎ ಸ್ಟೇಡಿಯಂನಲ್ಲಿ ಕೊನೆಯ ಬಾರಿ ಏಕದಿನ ಪಂದ್ಯ ನಿಗದಿಯಾಗಿತ್ತು.

ಇಂಗ್ಲೆಂಡ್ ತಂಡ ಭಾರತದ ವಿರುದ್ಧ ಮೂರು ಏಕದಿನ ಪಂದ್ಯಗಳನ್ನಾಡಲಿದೆ. ಮೊದಲ ಪಂದ್ಯ ಪುಣೆಯಲ್ಲಿ ನಡೆದರೆ, ಉಳಿದೆರಡು ಪಂದ್ಯಗಳು ಕಟಕ್(ಜ.19) ಹಾಗೂ ಕೋಲ್ಕತಾ(ಜ.22)ದಲ್ಲಿ ನಡೆಯಲಿದೆ. ಏಕದಿನ ಸರಣಿಯ ಬಳಿಕ ಉಭಯ ತಂಡಗಳು ಜ.26 ಹಾಗೂ ಫೆ.1ರ ನಡುವೆ ಕಾನ್ಪುರ, ನಾಗ್ಪುರ ಹಾಗೂ ಬೆಂಗಳೂರಿನಲ್ಲಿ ನಡೆಯುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News