ಪಾರ್ಥಿವ್ ಪಟೇಲ್‌ರಿಂದ ಸ್ಪರ್ಧೆ ಎದುರಿಸುತ್ತಿಲ್ಲ: ಸಹಾ
ಕೋಲ್ಕತಾ, ಡಿ.29: ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಗುಜರಾತ್‌ನ ಹಿರಿಯ ವಿಕೆಟ್‌ಕೀಪರ್ ಪಾರ್ಥಿವ್ ಪಟೇಲ್‌ರಿಂದ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯಲು ತಾನು ಸ್ಪರ್ಧೆ ಎದುರಿಸುತ್ತಿದ್ದೇನೆ ಎಂಬ ಮಾತನ್ನು ಭಾರತದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ವೃದ್ಧಿಮಾನ್ ಸಹಾ ನಿರಾಕರಿಸಿದ್ದಾರೆ.
‘‘ನಾನು ಅವರೊಂದಿಗೆ(ಪಾರ್ಥಿವ್) ಯಾವುದೇ ಸ್ಪರ್ಧೆ ಮಾಡುತ್ತಿಲ್ಲ.ನಾನು ನನ್ನ ಅವಕಾಶಕ್ಕಾಗಿ ಕಾಯುತ್ತಿರುವೆ. ನಾನು ಯಾರೊಂದಿಗೂ ಸ್ಪರ್ಧೆ ನಡೆಸುತ್ತಿಲ್ಲ. ಪಾರ್ಥಿವ್ ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ಉತ್ತಮವಾಗಿ ಆಡಿದ್ದರು. ತಂಡವೂ ಗೆಲುವು ಸಾಧಿಸಿದೆ. ಆಯ್ಕೆಯ ವೇಳೆ ಚಿತ್ರ ಸ್ಪಷ್ಟವಾಗಿರುತ್ತದೆ. ಪಾರ್ಥಿವ್ ಕೂಡ ತಂಡಕ್ಕೆ ವಾಪಸಾಗಲು ಯತ್ನಿಸುತ್ತಿದ್ದರು. ಆಯ್ಕೆಗಾರರಿಗೆ ಸರಿಯೆನಿಸಿದರೆ ಅದು ಸರಿ. ನಾನು ಯಾವತ್ತೂ ಬೇಸರಮಾಡಿಕೊಳ್ಳಲಾರೆ’’ ಎಂದು ಸಹಾ ಹೇಳಿದ್ದಾರೆ.
ಪಟೇಲ್ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯ ಕೊನೆಯ 3 ಪಂದ್ಯಗಳಲ್ಲಿ 2 ಅರ್ಧಶತಕಗಳ ಸಹಿತ ಒಟ್ಟು 195 ರನ್ ಗಳಿಸಿದ್ದಾರೆ. ಸಹಾ ಎರಡನೆ ಟೆಸ್ಟ್ ಪಂದ್ಯದ ವೇಳೆ ಗಾಯಗೊಂಡು ಸರಣಿಯಿಂದ ಹೊರಗುಳಿದಿದ್ದರು