ನಿವೃತ್ತಿಯ ಸೂಚನೆ ನೀಡಿದ ಲಿಯಾಂಡರ್ ಪೇಸ್
Update: 2017-01-02 09:22 IST
ಚೆನ್ನೈ,ಜ.2: ಡೇವಿಸ್ ಕಪ್ ಪಂದ್ಯಕ್ಕೆ ಸಿದ್ಧವಾಗುತ್ತಿರುವ ಭಾರತದ ಹಿರಿಯ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಅವರು ನಿವೃತ್ತಿಯದಿನ ಹತ್ತಿರುವಾಗಿರುವ ಸೂಚನೆಗಳನ್ನು ನೀಡಿದ್ದಾರೆ. 43ನೆ ಡೇವಿಸ್ ಕಪ್‌ನಲ್ಲಿ ಗೆಲುವು ಸಿಕ್ಕರೆ ನಿವೃತ್ತಿಯಾಗುವ ಸೂಚನೆ ಏನಾದರೂ ಇದೆಯೇ ಎಂಬ ಮಾಧ್ಯಮದ ಪ್ರಶ್ನೆಗೆ ಅವರು, ಕಾದು ನೋಡಿ ಎಂದು ಉತ್ತರಿಸಿದ್ದಾರೆ.
ನಾನೀಗ ಖುಷಿಯಾಗಿ ಆಡುತ್ತಿದ್ದೇನೆ. ನನಗೆ ಆಟ ಇಷ್ಟ ಎನ್ನುವ ಕಾರಣಕ್ಕೆ ಆಡುತ್ತಿದ್ದೇನೆ. ಏಕೆಂದರೆ ನನಗೆ ಈ ಆಟ ಮುಗಿಯುವ ಒಂದು ಹಂತ ಬಂದೇ ಬರುತ್ತದೆ. ಆದರೆ ಅದಕ್ಕೆ ಮೊದಲು ಎಲ್ಲರಿಗೂ ಧನ್ಯವಾದ ಅರ್ಪಿಸಬೇಕು. 20 ವರ್ಷಗಳಿಂದ ಎಲ್ಲರೂನನಗೆ ಪ್ರೋತ್ಸಾಹ ನೀಡಿದ್ದಾರೆ ಎಂದು ಲಿಯಾಂಡರ್ ಚೆನ್ನೈ ಓಪನ್‌ಗೆ ಮೊದಲು ತಮ್ಮ ಅಭಿಪ್ರಾಯ ಹೇಳಿದ್ದಾರೆ.
ಮಹೇಶ್ ಭೂಪತಿ ಆಟವಾಡದ ಕಪ್ತಾನರಾಗಿ ಡೇವಿಸ್ ಕಪ್ ನೇತೃತ್ವ ವಹಿಸಿರುವ ಬಗ್ಗೆಯೂ ಅವರು ಸಂತೋಷ ವ್ಯಕ್ತಪಡಿಸಿದ್ದಾರೆ.