×
Ad

ಭಾರತ ವಿರುದ್ಧ ಟೆಸ್ಟ್ ಸರಣಿ: ದುಬೈನಲ್ಲಿ ಆಸ್ಟ್ರೇಲಿಯ ಸಿದ್ಧತೆ

Update: 2017-01-02 11:03 IST

ದುಬೈ, ಜ.2: ಭಾರತ ವಿರುದ್ಧ ಟೆಸ್ಟ್ ಸರಣಿಗಾಗಿ ದುಬೈನಲ್ಲಿ ತಯಾರಿ ನಡೆಸಲು ಆಸ್ಟ್ರೇಲಿಯ ಯೋಜನೆ ಹಾಕಿಕೊಂಡಿದೆ. ಆಸ್ಟ್ರೇಲಿಯ ಮುಂದಿನ ತಿಂಗಳು ವಿಶ್ವದ ನಂ.1 ಟೆಸ್ಟ್ ತಂಡ ಭಾರತವನ್ನು ಅದರದೇ ನೆಲದಲ್ಲಿ ಎದುರಿಸಲಿದೆ. ಆಸೀಸ್ 2004ರ ಬಳಿಕ ಭಾರತದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿಲ್ಲ.

ದುಬೈನಲ್ಲಿರುವ ಐಸಿಸಿ ಅಕಾಡಮಿಯಲ್ಲಿ ಶಿಬಿರ ನಡೆಸಲು ನಿರ್ಧರಿಸಿರುವ ಆಸ್ಟ್ರೇಲಿಯ ತಂಡ ಭಾರತ ವಿರುದ್ಧ 2013ರಲ್ಲಿನ ಹೀನಾಯ ಸೋಲನ್ನು ಪುನರಾವರ್ತಿಸದೆ ಇರಲು ಎದುರು ನೋಡುತ್ತಿದೆ. 2013ರ ಭಾರತ ಪ್ರವಾಸದಲ್ಲಿ ಆಸ್ಟ್ರೇಲಿಯ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು 4-0 ಅಂತರದಿಂದ ಸೋತಿತ್ತು.

ದುಬೈ ಅಕಾಡಮಿಯಲ್ಲಿ 30ಕ್ಕೂ ಅಧಿಕ ಹುಲ್ಲಿನ ಪಿಚ್‌ಗಳಿವೆ. ಕ್ರಿಕೆಟ್ ಆಡುವ ವಿಭಿನ್ನ ದೇಶಗಳಿಂದ ತರಿಸಲಾಗಿದ್ದ ಮಣ್ಣಿನಿಂದ ಪಿಚ್‌ನ್ನು ರಚಿಸಲಾಗಿದೆ. ಇದರಲ್ಲಿ ಸ್ಪಿನ್ ಪಿಚ್‌ಗಳು ಮಾತ್ರವಲ್ಲ ವಿಭಿನ್ನ ರೀತಿಯ ಪಿಚ್‌ಗಳೂ ಇವೆ.

ಆಸ್ಟ್ರೇಲಿಯ ಫೆ.23 ರಂದು ಪುಣೆಯಲ್ಲಿ ಮೊದಲ ಟೆಸ್ಟ್ ಪಂದ್ಯವನ್ನು ಆಡುವ ಮೂಲಕ ಭಾರತದ ಪ್ರವಾಸವನ್ನು ಆರಂಭಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News