ಎಟಿಪಿ ಚೆನ್ನೈ ಓಪನ್: ಭಾಂಬ್ರಿ ದ್ವಿತೀಯ ಸುತ್ತಿಗೆ

Update: 2017-01-03 18:06 GMT

ಚೆನ್ನೈ, ಜ.3: ಎಟಿಪಿ ಚೆನ್ನೈ ಓಪನ್‌ನಲ್ಲಿ ಭಾರತದ ಡೇವಿಸ್‌ಕಪ್ ಆಟಗಾರ ಯೂಕಿ ಭಾಂಬ್ರಿ ಎರಡನೆ ಸುತ್ತಿಗೆ ಪ್ರವೇಶಿಸಿದ್ದಾರೆ.

ಇಲ್ಲಿ ಮಂಗಳವಾರ ನಡೆದ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಭಾಂಬ್ರಿ ಅವರು ಲೋಕಲ್ ಹೀರೊ ರಾಮ್‌ಕುಮಾರ್ ರಾಮನಾಥನ್‌ರನ್ನು 6-1, 6-1 ನೇರ ಸೆಟ್‌ಗಳ ಅಂತರದಿಂದ ಮಣಿಸಿದರು.

ಮಣಿಕಟ್ಟು ಗಾಯದಿಂದ ಚೇತರಿಸಿಕೊಂಡು ಆರು ತಿಂಗಳ ಬಳಿಕ ಸಕ್ರಿಯ ಟೆನಿಸ್‌ಗೆ ಮರಳಿದ ಭಾಂಬ್ರಿ ವರ್ಷಾರಂಭದಲ್ಲಿ ಉತ್ತಮ ಪ್ರದರ್ಶನದಿಂದ ಗಮನ ಸೆಳೆಯುತ್ತಿದ್ದಾರೆ. ಭಾರತದ ಇಬ್ಬರು ಶ್ರೇಷ್ಠ ಸಿಂಗಲ್ಸ್ ಆಟಗಾರರು ಆಡಿದ ಈ ಪಂದ್ಯ ಭಾರೀ ಮಹತ್ವ ಪಡೆದಿತ್ತು. ಆದರೆ, ಪಂದ್ಯ ನಿರೀಕ್ಷಿಸಿದಷ್ಟು ಕುತೂಹಲಕಾರಿಯಾಗಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News