ಸೂಟ್ ಕೇಸ್ ನೊಳಗೆ 19 ವರ್ಷದ ಜೀವಂತ ಯುವಕ !
Update: 2017-01-03 23:49 IST
ಸ್ಪೇನ್, ಜ.3: 19 ವರ್ಷದ ಯುವಕೋರ್ವನನ್ನು ಸೂಟ್‌ಕೇಸ್‌ನೊಳಗೆ ಬಚ್ಚಿಟ್ಟುಕೊಂಡು ಸ್ಪೇನ್ ದೇಶದೊಳಗೆ ಸಾಗಿಸಲು ಯತ್ನಿಸಿದ ಯುವತಿಯೋರ್ವಳನ್ನು ಬಂಧಿಸಲಾಗಿದೆ.
22 ವರ್ಷದ ಈ ಮಹಿಳೆ ನೆರೆಯ ಮೊರೊಕ್ಕೋದಿಂದ ಗಡಿ ದಾಟಿ ಉತ್ತರ ಆಫ್ರಿಕಾಲ್ಲಿ ಸ್ಪೇನ್‌ನ ಅಧಿಕಾರದಡಿ ಇರುವ ಸ್ಯೂಟ ಎಂಬ ಪ್ರದೇಶಕ್ಕೆ ತೆರಳಲು ಬಯಸಿದ್ದಳು. ಈ ವೇಳೆ ಗಡಿ ನಿಯಂತ್ರಣಾ ಅಧಿಕಾರಿಗಳಿಗೆ ಈಕೆಯ ಬಳಿಯಿದ್ದ ಭಾರೀ ಗಾತ್ರದ ಸೂಟ್‌ಕೇಸ್ ಮೇಲೆ ಅನುಮಾನ ಮೂಡಿದೆ. ಈಕೆ ಸೂಟ್‌ಕೇಸನ್ನು ಟ್ರಕ್‌ನ ಮೇಲಿರಿಸಿಕೊಂಡು ತಂದಿದ್ದಳು.
ತನಿಖಾಧಿಕಾರಿಗಳ ಪ್ರಶ್ನೆಗೆ ಈಕೆ ನೀಡಿದ ಅಸಮರ್ಪಕ ಉತ್ತರದಿಂದ ಅನುಮಾನ ಬಲಗೊಂಡಿತು. ಸೂಟ್‌ಕೇಸ್ ತೆರೆದು ನೋಡಿದಾಗ ಒಳಗೆ ಗಾಬನ್‌ನಿಂದ ವಲಸೆ ಬಂದಿದ್ದ 19ರ ಹರೆಯದ ಯುವಕನೋರ್ವ ಇದ್ದ. ಅಲ್ಲಿ ಆಮ್ಲಜನಕದ ಕೊರತೆಯಿಂದ ಈತನ ಸ್ಥಿತಿ ಬಿಗಡಾಯಿಸಿತ್ತು. ತಕ್ಷಣ ಈತನಿಗೆ ಚಿಕಿತ್ಸೆ ನೀಡಲಾಯಿತು.