×
Ad

ಬಾಂಗ್ಲಾವನ್ನು ಮಣಿಸಿದ ಭಾರತ ಚಾಂಪಿಯನ್

Update: 2017-01-04 23:11 IST

ಸಿಲಿಗುರಿ, ಜ.4: ನಾಲ್ಕನೆ ಆವೃತ್ತಿಯ ಸ್ಯಾಫ್ ವನಿತೆಯರ ಫುಟ್ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಬಾಂಗ್ಲಾದೇಶವನ್ನು 3-1 ಗೋಲುಗಳ ಅಂತರದಿಂದ ಮಣಿಸಿರುವ ಭಾರತ ಸತತ ನಾಲ್ಕನೆ ಬಾರಿ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.

ಈ ಮೂಲಕ ಭಾರತದ ಗೋಲ್ಡನ್‌ಗರ್ಲ್ಸ್ 19 ಪಂದ್ಯಗಳಲ್ಲಿ ಅಜೇಯವಾಗುಳಿದಿದ್ದಾರೆ. ಭಾರತ 18ರಲ್ಲಿ ಜಯ ಹಾಗೂ 1ರಲ್ಲಿ ಡ್ರಾ ಸಾಧಿಸಿದೆ.

 ಡಂಗ್‌ಮಿ ಗ್ರೇಸ್ 12ನೆ ನಿಮಿಷದಲ್ಲಿ ಗೋಲು ಬಾರಿಸಿ ಭಾರತಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು. 40ನೆ ನಿಮಿಷದಲ್ಲಿ ಗೋಲು ಬಾರಿಸಿದ ಬಾಂಗ್ಲಾದೇಶ 1-1 ರಿಂದ ಸಮಬಲಗೊಳಿಸಿತು. ಮೊದಲಾರ್ಧದಲ್ಲಿ ಉಭಯ ತಂಡಗಳು 1-1 ರಿಂದ ಸಮಬಲಗೊಳಿಸಿದವು.

60ನೆ ನಿಮಿಷದಲ್ಲಿ 2016ರ ಎಐಎಫ್‌ಎಫ್ ವರ್ಷದ ಆಟಗಾರ್ತಿ ಪ್ರಶಸ್ತಿ ವಿಜೇತೆ ಸಸ್ಮಿತಾ ಮಲಿಕ್ ಪೆನಾಲ್ಟಿ ಕಾರ್ನರ್‌ರನ್ನು ಗೋಲಾಗಿ ಪರಿವರ್ತಿಸಿ ಭಾರತಕ್ಕೆ 2-1 ಮುನ್ನಡೆ ಒದಗಿಸಿಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News