×
Ad

ನಡಾಲ್‌ಗೆ ಸೋಲು, ನಿಶಿಕೊರಿ ಜಯಭೇರಿ

Update: 2017-01-06 23:15 IST

ಬ್ರಿಸ್ಬೇನ್,ಜ.6: ಸ್ಪೇನ್‌ನ ರಫೆಲ್ ನಡಾಲ್‌ರನ್ನು ಮಣಿಸಿರುವ ಮಿಲಾಸ್ ರಾವೊನಿಕ್ ಬ್ರಿಸ್ಬೇನ್ ಇಂಟರ್‌ನ್ಯಾಶನಲ್ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ತಲುಪಿದ್ದಾರೆ.

ಹಾಲಿ ಚಾಂಪಿಯನ್ ರಾವೊನಿಕ್ ಶುಕ್ರವಾರ ಇಲ್ಲಿ ನಡೆದ ಪುರುಷರ ಸಿಂಗಲ್ಸ್‌ನ ಸೆಮಿಫೈನಲ್‌ನಲ್ಲಿ ನಡಾಲ್‌ರನ್ನು 4-6, 6-3, 6-4 ಸೆಟ್‌ಗಳ ಅಂತರದಿಂದ ಸೋಲಿಸಿದ್ದಾರೆ. ನಡಾಲ್‌ರನ್ನು ಬೆಂಬಲಿಸಲು ಆಗಮಿಸಿದ್ದ ಪ್ರೇಕ್ಷಕರು ಭಾರೀ ನಿರಾಸೆಗೊಂಡರು.

2016ರಲ್ಲಿ ಫೈನಲ್‌ನಲ್ಲಿ ರೋಜರ್ ಫೆಡರರ್‌ರನ್ನು ಮಣಿಸಿದ್ದ ರಾವೊನಿಕ್ ಬ್ರಿಸ್ಬೇನ್ ಇಂಟರ್‌ನ್ಯಾಶನಲ್ ಪ್ರಶಸ್ತಿಯನ್ನು ಜಯಿಸಿದ್ದರು. ಕೆನಡಾದ ರಾವೊನಿಕ್ ಕಳೆದ ವಾರ ಅಬುಧಾಬಿಯಲ್ಲಿ ನಡೆದಿದ್ದ ಪ್ರದರ್ಶನ ಪಂದ್ಯದಲ್ಲಿ ನಡಾಲ್‌ಗೆ ಸೋತಿದ್ದರು.ಇದೀಗ ಆ ಸೋಲಿಗೆ ತಕ್ಕ ಸೇಡು ತೀರಿಸಿಕೊಂಡಿದ್ದಾರೆ.

ವಾವ್ರಿಂಕ-ನಿಶಿಕೊರಿ ಸೆಮಿಫೈನಲ್ ಸೆಣಸು: ದ್ವಿತೀಯ ಶ್ರೇಯಾಂಕದ ಆಟಗಾರ ಸ್ಟಾನಿ ವಾವ್ರಿಂಕ ಎರಡೂವರೆ ಗಂಟೆಗಳ ಹೋರಾಟದಲ್ಲಿ ಕೈಲ್ ಎಡ್ಮಂಡ್‌ರನ್ನು 6-7(2/7), 6-4, 6-4 ಸೆಟ್‌ಗಳ ಅಂತರದಿಂದ ಮಣಿಸಿದರು.

ಮತ್ತೊಂದು ಕ್ವಾರ್ಟರ್ ಫೈನಲ್‌ನಲ್ಲಿ ಜಪಾನ್ ಕೀ ನಿಶಿಕೊರಿ ಆಸ್ಟ್ರೇಲಿಯದ ಜೋರ್ಡನ್ ಥಾಂಪ್ಸನ್‌ರನ್ನು 6-1, 6-1 ನೇರ ಸೆಟ್‌ಗಳಿಂದ ಮಣಿಸಿ ಸೆಮಿಫೈನಲ್‌ಗೆ ತಲುಪಿದ್ದಾರೆ.

ಹಾಲಿ ಯುಎಸ್ ಓಪನ್ ಚಾಂಪಿಯನ್ ವಾವ್ರಿಂಕ ಅವರು ಕೈಲ್ ಎಡ್ಮಂಡ್‌ರಿಂದ ತೀವ್ರ ಹೋರಾಟ ಎದುರಿಸಿದ್ದರು. ದೀರ್ಘಸಮಯ ಪಂದ್ಯದಲ್ಲಿ ಪ್ರಾಬಲ್ಯ ಸಾಧಿಸಿದ್ದ ಎಡ್ಮಂಡ್ ಮೊದಲ ಸೆಟ್‌ನ್ನು ಗೆದ್ದುಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News