‘‘ಎಂದೆಂದೂ ನನಗೆ ನೀವೇ ಕ್ಯಾಪ್ಟನ್ ಧೋನಿ ಭಾಯ್’’ : ಕೊಹ್ಲಿ

Update: 2017-01-06 18:09 GMT

  ಮುಂಬೈ,ಜ.6: ಮಹೇಂದ್ರ ಸಿಂಗ್ ಧೋನಿ ಭಾರತದ ಸೀಮಿತ ಓವರ್‌ಗಳ ಕ್ರಿಕೆಟ್ ತಂಡದಿಂದ ಕೆಳಗಿಳಿದ ಎರಡು ದಿನಗಳ ಬಳಿಕ ಪ್ರತಿಕ್ರಿಯೆ ನೀಡಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಧೋನಿಯನ್ನುದ್ದೇಶಿಸಿ ‘‘ ಎಂದೆಂದೂ ನನಗೆ ನೀವೇ ಕ್ಯಾಪ್ಟನ್ ಧೋನಿ ಭಾಯ್’’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಯುವ ಕ್ರಿಕೆಟಿಗರಿಗೆ ಎಂತಹ ನಾಯಕ ಬೇಕು ಎಂಬುದನ್ನು ತೋರಿಸಿಕೊಟ್ಟ ನಿಮಗೆ ತುಂಬು ಹೃದಯದ ಧನ್ಯವಾದಗಳು ’’ ಎಂದು ಕೊಹ್ಲಿ ಟ್ವೀಟ್ ಮಾಡಿದ್ಧಾರೆ.
  ಟೆಸ್ಟ್ ತಂಡದ ನಾಯಕರಾಗಿರುವ ಕೊಹ್ಲಿ ಅವರು ಧೋನಿ ನಾಯಕತ್ವ ತ್ಯಜಿಸಿದ ಹಿನ್ನೆಲೆಯಲ್ಲಿ ಏಕದಿನ ಮತ್ತು ಟ್ವೆಂಟಿ-20 ಕ್ರಿಕೆಟ್ ತಂಡಕ್ಕೂ ನಾಯಕರಾಗಿ ಆಯ್ಕೆಯಾಗಿದ್ದಾರೆ. ಧೋನಿ ನಾಯಕತ್ವ ತ್ಯಜಿಸಿದ್ದರೂ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಇಂಗ್ಲೆಂಡ್ ವಿರುದ್ಧದ ಏಕದಿನ ಮತ್ತು ಟ್ವೆಂಟಿ-20 ಸರಣಿಯಲ್ಲಿ ಟೀಮ್ ಇಂಡಿಯಾದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿ ಆಡಲಿದ್ದಾರೆ.
,,,,,,,,,,,,,,,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News