10,000 ರನ್ ಸಾಧನೆಯಿಂದ ವಂಚಿತ ಯೂನಿಸ್ ಖಾನ್

Update: 2017-01-07 18:22 GMT

ಸಿಡ್ನಿ, ಜ.7: ಪಾಕಿಸ್ತಾನದ ಹಿರಿಯ ಬ್ಯಾಟ್ಸ್‌ಮನ್ ಯೂನಿಸ್ ಖಾನ್ ಆಸ್ಟ್ರೇಲಿಯದ ವಿರುದ್ಧ ಸಿಡ್ನಿಯಲ್ಲಿ ನಡೆಯುತ್ತಿರುವ ಮೂರನೆ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ 10,000 ರನ್ ಸಾಧನೆಯಿಂದ ವಂಚಿತರಾದರು.

 ಬಲಗೈ ಬ್ಯಾಟ್ಸ್‌ಮನ್ ಖಾನ್ ಐದನೆ ಹಾಗೂ ಅಂತಿಮ ದಿನವಾದ ಶನಿವಾರ 13 ರನ್ ಗಳಿಸಿ ಸ್ಪಿನ್ನರ್ ನಥಾನ್ ಲಿಯೊನ್‌ಗೆ ವಿಕೆಟ್ ಒಪ್ಪಿಸಿದರು. 10,000 ರನ್ ಗಳಿಸಿದ ಪಾಕಿಸ್ತಾನದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಲು ಕೇವಲ 23 ರನ್ ಕೊರತೆ ಎದುರಿಸಿದರು.

39ರ ಪ್ರಾಯದ ಯೂನಿಸ್ ಖಾನ್ 115 ಟೆಸ್ಟ್ ಪಂದ್ಯಗಳಲ್ಲಿ 9,977 ರನ್ ಗಳಿಸಿದ್ದಾರೆ. ‘‘ಪಾಕಿಸ್ತಾನ ಕ್ರಿಕೆಟ್ ಮಂಡಳಿ ಬಯಸಿದರೆ ನಾನು ಕ್ರಿಕೆಟ್‌ನಲ್ಲಿ ಮುಂದುವರಿಯುವೆ. ನಾನು ತಂಡದಲ್ಲಿ ಮುಂದುವರಿಯುವುದು ನಮ್ಮ ತಂಡವನ್ನು ಅವಲಂಬಿಸಿದೆ. ಇದು ನನಗೆ ಅತ್ಯಂತ ಮುಖ್ಯ ಅಂಶವಾಗಿದೆ. ನಾನು 10,000 ರನ್‌ಗೆ ಹತ್ತಿರವಾಗಿದ್ದೇನೆಂದು ಈ ಮಾತು ಹೇಳುತ್ತಿಲ್ಲ. ನಾನು 10,000 ರನ್ ಪೂರೈಸಿದರೆ ಅದು ಪಾಕಿಸ್ತಾನದ ದೊಡ್ಡ ಸಾಧನೆಯಾಗುತ್ತದೆ. 10,000 ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಪಾಕಿಸ್ತಾನದ ಯಾವೊಬ್ಬ ಆಟಗಾರನೂ ಇಲ್ಲವೆಂಬುದು ನೀವು ನೋಡಿದ್ದೀರಿ’’ ಎಂದು ಯೂನಿಸ್ ಖಾನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News