ದಕ್ಷಿಣ ಆಫ್ರಿಕ ವಿರುದ್ಧ ಟ್ವೆಂಟಿ-20 ಸರಣಿ: ಶ್ರೀಲಂಕಾ ತಂಡ ಪ್ರಕಟ

Update: 2017-01-11 18:07 GMT

ಹೊಸದಿಲ್ಲಿ, ಜ.11: ಶ್ರೀಲಂಕಾ ತಂಡ ಬುಧವಾರ ದಕ್ಷಿಣ ಆಫ್ರಿಕ ವಿರುದ್ಧದ ಟ್ವೆಂಟಿ-20 ಸರಣಿಗೆ 15 ಸದಸ್ಯರನ್ನು ಒಳಗೊಂಡ ತಂಡವನ್ನು ಪ್ರಕಟಿಸಿದೆ.

ಥಿಕ್‌ಶಿಲಾ ಡಿಸಿಲ್ವಾ ಹೊಸ ಮುಖವಾಗಿದ್ದು, ಇಸುರು ಉದಾನ ಸಹಿತ ಹಲವರು ತಂಡಕ್ಕೆ ವಾಪಸಾಗಿದ್ದಾರೆ.

23ರ ಹರೆಯದ ಡಿಸಿಲ್ವಾ ಬ್ಯಾಟಿಂಗ್ ಆಲ್‌ರೌಂಡರ್ ಆಗಿದ್ದು, ಮಧ್ಯಮ ವೇಗದಲ್ಲಿ ಬೌಲಿಂಗ್ ಮಾಡಬಲ್ಲರು. ಇದೀಗ ಅವರು ಮೊದಲ ಬಾರಿ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಲಸಿತ ಮಾಲಿಂಗ ಸರಣಿಯಿಂದ ಹೊರಗುಳಿದಿರುವ ಕಾರಣ ಆ್ಯಂಜೆಲೊ ಮ್ಯಾಥ್ಯೂಸ್ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ.

 ಉದಾನ ಅವರೊಂದಿಗೆ ನುವಾನ್ ಕುಲಶೇಖರ ತಂಡಕ್ಕೆ ವಾಪಸಾಗಿದ್ದಾರೆ. ಬಿಗ್-ಹಿಟ್ಟರ್ ಹಾಗೂ ಲೆಗ್ ಸ್ಪಿನ್ನರ್ ಸೀಕುಗೆ ಪ್ರಸನ್ನ ತಂಡಕ್ಕೆ ಮರಳಿದ್ದಾರೆ.

ಮ್ಯಾಥ್ಯೂಸ್ ಹಾಗೂ ಮಾಲಿಂಗ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯ ವಿರುದ್ಧ ತಂಡವನ್ನು ಮುನ್ನಡೆಸಿದ್ದ ದಿನೇಶ್ ಚಾಂಡಿಮಲ್ ತಂಡದ ಉಪ ನಾಯಕನಾಗಿ ಆಯ್ಕೆಯಾಗಿದ್ದಾರೆ.

ದಕ್ಷಿಣ ಆಫ್ರಿಕದಲ್ಲಿ ಟೆಸ್ಟ್ ಸರಣಿಯನ್ನು ಆಡಿರುವ ಐವರು ಆಟಗಾರರು ಟ್ವೆಂಟಿ-20 ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಜ.20 ರಂದು ಸೆಂಚೂರಿಯನ್‌ನಲ್ಲಿ ಆರಂಭವಾಗಲಿದೆ.

ಶ್ರೀಲಂಕಾ ಟ್ವೆಂಟಿ-20 ತಂಡ: ಆ್ಯಂಜೆಲೊ ಮ್ಯಾಥ್ಯೂಸ್(ನಾಯಕ), ದಿನೇಶ್ ಚಾಂಡಿಮಲ್(ಉಪ ನಾಯಕ), ದನುಷ್ಕಾ ಗುಣತಿಲಕ, ಸೀಕುಗೆ ಪ್ರಸನ್ನ, ನಿರೊಶನ್ ಡಿಕ್‌ವೆಲ್ಲಾ, ಸುರಂಗ ಲಕ್ಮಲ್, ನುವಾನ್ ಪ್ರದೀಪ್, ಇಸುರು ಉದಾನ, ಕುಶಾಲ್ ಮೆಂಡಿಸ್, ಧನಂಜಯ್ ಡಿಸಿಲ್ವಾ, ಅಸೆಲಾ ಗುಣರತ್ನ, ಸಚಿತ್ ಪಥಿರನ, ಲಕ್ಷ್ಮಣ್ ಸಡಕನ್, ಥಿಕ್‌ಶಿಲಾ ಡಿಸಿಲ್ವಾ, ನುವಾನ್ ಕುಲಶೇಖರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News