ಊಹಿಸಿ... ಮರಿನ್ ಫೇವರಿಟ್ ಆಟಗಾರ ಯಾರು?

Update: 2017-01-11 18:17 GMT

ಹೊಸದಿಲ್ಲಿ, ಜ.11: ವಿಶ್ವದ ನಂ.1 ಬ್ಯಾಡ್ಮಿಂಟನ್ ಆಟಗಾರ್ತಿ ಕ್ಯಾರೊಲಿನ್ ಮರಿನ್‌ಗೆ ತಾನಾಡುತ್ತಿರುವ ಕ್ರೀಡೆಯಲ್ಲಿ ಫೇವರಿಟ್ ಆಟಗಾರರಿಲ್ಲ ಎಂಬುದನ್ನು ನೀವು ನಂಬುತ್ತೀರಾ?

ಹೌದು, ಇದನ್ನು ನೀವು ನಂಬಲೇಬೇಕು. ಮರಿನ್‌ಗೆ ಯಾರೂ ಐಕಾನ್ ಆಟಗಾರರಿಲ್ಲ. ಅವರಿಗೆ ತಮ್ಮದೇ ದೇಶದ 14 ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ರಫೆಲ್ ನಡಾಲ್ ಅಚ್ಚುಮೆಚ್ಚಿನ ಆಟಗಾರ.

‘‘ನನಗೆ ಬ್ಯಾಡ್ಮಿಂಟನ್‌ನಲ್ಲಿ ಯಾರೂ ಫೇವರಿಟ್ ಆಟಗಾರರಿಲ್ಲ. ಆದರೆ, ಟೆನಿಸ್ ಸ್ಟಾರ್ ರಫೆಲ್ ನಡಾಲ್ ನನ್ನ ಐಕಾನ್ ಆಟಗಾರನಾಗಿದ್ದಾರೆ’’ ಎಂದು ಎಎನ್‌ಐಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಮರಿನ್‌ ತಿಳಿಸಿದ್ದಾರೆ.

2016ರ ರಿಯೋ ಒಲಿಂಪಿಕ್ಸ್ ಫೈನಲ್‌ನಲ್ಲಿ ಪಿ.ವಿ.ಸಿಂಧು ಅವರನ್ನು ಮಣಿಸಿ ಚಿನ್ನದ ಪದಕ ಗೆಲ್ಲುವ ತನಕ ವಿಶ್ವದ ನಂ.1 ಆಟಗಾರ್ತಿ ಮರಿನ್ ಭಾರತೀಯರಿಗೆ ಅಪರಿಚಿತರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News