ಇರಾನಿ ಕಪ್: ಮುಂಬೈ ಆತಿಥ್ಯ
Update: 2017-01-12 23:30 IST
ಮುಂಬೈ, ಜ.12: ಮುಂಬೈನ ವಾಂಖೆಡೆ ಸ್ಟೇಡಿಯಂ ಜ.18 ರಿಂದ 22ರ ತನಕ ನಡೆಯಲಿರುವ ಇರಾನಿ ಕಪ್‌ನ ಆತಿಥ್ಯವಹಿಸಿಕೊಳ್ಳಲಿದೆ ಎಂದು ಮುಂಬೈ ಕ್ರಿಕೆಟ್ ಸಂಸ್ಥೆ(ಎಂಸಿಎ)ಯ ಉಪಾಧ್ಯಕ್ಷ ವಿನೋದ್ ದೇಶಪಾಂಡೆ ಬುಧವಾರ ಘೋಷಿಸಿದ್ದಾರೆ.
‘‘ನಾವು ವಾಂಖೆಡೆ ಸ್ಟೇಡಿಯಂನಲ್ಲಿ ಇರಾನಿ ಕಪ್ ಪಂದ್ಯಗಳ ಆತಿಥ್ಯವಹಿಸಿಕೊಳ್ಳಲಿದ್ದೇವೆ’’ ಎಂದು ದೇಶಪಾಂಡೆ ತಿಳಿಸಿದರು.
ಇರಾನಿ ಕಪ್‌ನಲ್ಲಿ ಈ ವರ್ಷದ ರಣಜಿ ಟ್ರೋಫಿ ಚಾಂಪಿಯನ್ ತಂಡ ಶೇಷ ಭಾರತ ತಂಡವನ್ನು ಎದುರಿಸಲಿದೆ.
ಮುಂಬೈ ತಂಡ ಪ್ರಸ್ತುತ ಇಂದೋರ್‌ನ ಹೋಳ್ಕರ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಫೈನಲ್‌ನಲ್ಲಿ ಗುಜರಾತ್ ತಂಡದ ವಿರುದ್ಧ ಆಡುತ್ತಿದೆ. ಈ ಪಂದ್ಯದಲ್ಲಿ ರಣಜಿ ಟ್ರೋಫಿಯ ಚಾಂಪಿಯನ್ ತಂಡ ನಿರ್ಧಾರವಾಗಲಿದ್ದು, ಆ ತಂಡ ಇರಾನಿ ಕಪ್‌ನಲ್ಲಿ ಶೇಷ ಭಾರತವನ್ನು ಎದುರಿಸಲಿದೆ.