ಟೀಮ್ ಇಂಡಿಯಾಕ್ಕೆ ಹೊಸ ಕಿಟ್
ಹೊಸದಿಲ್ಲಿ, ಜ.12: ಭಾರತೀಯ ಕ್ರಿಕೆಟ್ ತಂಡಗಳ ಉಡುಪುಗಳ ಅಧಿಕೃತ ಪ್ರಾಯೋಜಕರಾಗಿರುವ ನೈಕ್ ಸಂಸ್ಥೆ ಮುಂಬರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಮೊದಲು ತಂಡದ ಹೊಸ ಏಕದಿನ ಕಿಟ್‌ನ್ನು ಅನಾವರಣಗೊಳಿಸಿದೆ. ‘‘ಸ್ವ-ನಂಬಿಕೆಯ’’ ಪ್ರತಿಬಿಂಬ ಎಂಬ ಧ್ಯೇಯವಾಕ್ಯದೊಂದಿಗೆ ಕಿಟ್‌ಗಳನ್ನು ಬಿಡುಗಡೆ ಮಾಡಿದೆ.
ಆಟಗಾರರ ಅಭಿಪ್ರಾಯವನ್ನು ಸಂಗ್ರಹಿಸಿದ ಬಳಿಕ ನೂತನ ಜರ್ಸಿಯನ್ನು ತಯಾರಿಸಲಾಗಿದೆ. ‘4ಡಿ ಕ್ವಿಕ್‌ನೆಸ್’ ಹೊಸ ಕಿಟ್‌ನಲ್ಲಿರುವ ಒಂದು ಹೈಲೈಟ್ ಆಗಿದೆ.
ಕ್ರಿಕೆಟ್ ಪಂದ್ಯ ಕಳೆದ ಕೆಲವು ವರ್ಷಗಳಿಂದ ವಿಕಾಸವಾಗುತ್ತಿದೆ. ಆಧುನಿಕ ಪಂದ್ಯಕ್ಕೆ ಅನುಗುಣವಾಗಿ ಕಿಟ್ಸ್‌ನ್ನು ವಿನ್ಯಾಸಗೊಳಿಸುವುದು ಟೀಮ್ ಮ್ಯಾನೇಜ್‌ಮೆಂಟ್ ಹಾಗೂ ನೈಕ್‌ನ ಮೊದಲ ಆದ್ಯತೆಯಾಗಿದೆ. 4 ಡಿ ಕ್ವಿಕ್‌ನೆಸ್ ಹಾಗೂ ಶೂನ್ಯ ವ್ಯಾಕುಲತೆಯಂತಹ ವೈಶಿಷ್ಟಗಳು ತಂಡಕ್ಕೆ ಮೈದಾನದಲ್ಲಿ ನೆರವಿಗೆ ಬರಲಿದೆ ಎಂದು ಭಾರತದ ಮಾಜಿ ನಾಯಕ ಎಂಎಸ್ ಧೋನಿ ಅಭಿಪ್ರಾಯಪಟ್ಟಿದ್ದಾರೆ.
ಭಾರತ ಜ.15(ರವಿವಾರ)ರಂದು ಪುಣೆಯಲಿ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯವನ್ನು ಆಡಲಿದೆ. ಭಾರತ ಮೊದಲ ಬಾರಿ ಹೊಸ ಲುಕ್‌ನಲ್ಲಿ ಮೈದಾನದಲ್ಲಿ ಕಾಣಿಸಿಕೊಳ್ಳಲಿದೆ.