ಒಲಿಂಪಿಯನ್ ಯೋಗೀಶ್ವರ ದತ್ ತೆಗೆದುಕೊಳ್ಳುವ ವರದಕ್ಷಿಣೆ ಎಷ್ಟು ಗೊತ್ತೇ ? ಓದದೆ ನಿರ್ಧಾರಕ್ಕೆ ಬರಬೇಡಿ
ರೋಹ್ಟಕ್, ಜ.15: ಲಂಡನ್ ಒಲಿಂಪಿಕ್ ನಲ್ಲಿ ಕಂಚು ಜಯಿಸಿದ ಯೋಗೀಶ್ವರ ದತ್ ಜನವರಿ 16ರಂದು ದಾಂಪತ್ಯ ಬದುಕಿಗೆ ಕಾಲಿರಿಸಲಿದ್ದಾರೆ. ಅವರನ್ನು ಮದುವೆಯಾಗಲಿರುವ ಯುವತಿ ಹರ‍್ಯಾಣದ ಕಾಂಗ್ರೆಸ್ ಧುರೀಣ ಜೈಭಗವಾನ್ ಪುತ್ರಿ ಶೀತಲ್.
ಯೋಗೀಶ್ವರ ದತ್ ಮತ್ತು ಶೀತಲ್ ವಿವಾಹದ ನಿಶ್ಚಿತಾರ್ಥ ಮುರ್ತಾಲ್ ನ ಸೋನಾಪತ್ ನಲ್ಲಿ ಶನಿವಾರ ನಡೆದಿತ್ತು.
" ಕುಸ್ತಿಯಲ್ಲಿ ಬೆಳೆಯಬೇಕು ಮತ್ತು ವರದಕ್ಷಿಣೆ ಪಡೆಯದೆ ವಿವಾಹವಾಗಬೇಕೆಂಬ ಕನಸು ಕಂಡಿದ್ದೆ. ಮೊದಲ ಕನಸು ನನಸಾಗಿದೆ. ಇನ್ನೊಂದು ಕನಸು ನನಸಾಗುವ ಕಾಲ ಕೂಡಿ ಬಂದಿದೆ ಎಂದು ಯೋಗೀಶ್ವರ ದತ್ ತಿಳಿಸಿದ್ದಾರೆ.
ಹೆಣ್ಣು ಹೆತ್ತವರು ವರದಕ್ಷಿಣಿ ನೀಡುವುದಕ್ಕೆ ಹಣ ಹೊಂದಿಸಲು ಕಷ್ಟಪಡುತ್ತಿರುವುದನ್ನು ನೋಡಿ ತಾನು ವರದಕ್ಷಿಣೆ ಪಡೆಯದೆ ವಿವಾಹವಾಗುವ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ.
ಯೋಗೀಶ್ವರ ದತ್ ಸುಶೀಲಾ ದೇವಿ ಪ್ರಕಾರ ಮಗನ ವಿವಾಹ ವಿಶಿಷ್ಟವೆನಿಸಿಕೊಳ್ಳಲಿದೆ. ಅವರ ಕುಟುಂಬ ಯೋಗೀಶ್ವರ ದತ್ ವಿವಾಹವಾಗಲಿರುವ ಯುವತಿಯ ಕುಟುಂಬದವರಿಂದ 1 ರೂ. ವರದಕ್ಷಿಣಿ ಪಡೆಯಲಿದೆ ಎಂದು ಸುಶೀಲಾ ದೇವಿ ತಿಳಿಸಿದ್ದಾರೆ. ಅವರು ಪಡೆಯುವ 1 ರೂ. ಒಳ್ಳೆಯ ಕುಟುಂಬದ ಹೆಣ್ಣು ಎನ್ನುವುದನ್ನು ಸೂಚಿಸುತ್ತದೆ.ಇದನ್ನು ಹೊರತುಪಡಿಸಿದರೆ ಬೇರೇನು ಇಲ್ಲ.