ಮೊದಲ ಏಕದಿನ: ಭಾರತದ ಗೆಲುವಿಗೆ 351 ರನ್‌ಗಳ ಸವಾಲು
Update: 2017-01-15 17:14 IST
ಪುಣೆ, ಜ.15: ಇಲ್ಲಿ ಆರಂಭಗೊಂಡ ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಗೆಲುವಿಗೆ 351 ರನ್‌ಗಳ ಸವಾಲು ಪಡೆದಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಇಂಗ್ಲೆಂಡ್ ತಂಡ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 350ರನ್ ಗಳಿಸಿ ಭಾರತಕ್ಕೆ ಕಠಿಣ ಸವಾಲು ವಿಧಿಸಿದೆ.
ಇಂಗ್ಲೆಂಡ್ ತಂಡದ ಆರಂಭಿಕ ದಾಂಡಿಗ ಜೇಸನ್ ರಾಯ್ 73 ರನ್, ಜೋ ರೂಟ್ 78 ರನ್, ಬೆನ್ ಸ್ಟೋಕ್ಸ್ 62 ರನ್, ಇಯಾನ್ ಮೊರ್ಗನ್ 28 ರನ್, ಬಟ್ಲರ್ 31 ರನ್, ಎಂಎಂ ಅಲಿ 28 ರನ್, ವೋಕ್ಸ್ ಔಟಾಗದೆ 9 ರನ್, ವಿಲ್ಲಿ ಔಟಾಗದೆ 10 ರನ್, ಹೇಲ್ಸ್ 9 ರನ್ ಗಳಿಸಿದರು. ಭಾರತದ ಪರ ಪಾಂಡ್ಯ ಮತ್ತು ಬುಮ್ರಾ ತಲಾ 2 ವಿಕೆಟ್, ಉಮೇಶ್ ಯಾದವ್ ಮತ್ತು ಜಡೇಜ ತಲಾ 1 ವಿಕೆಟ್ ಹಂಚಿಕೊಂಡರು